ನವದೆಹಲಿ: ಪ್ರಸಕ್ತ ರಣಜಿ ಋತುವಿನ ಫೈನಲ್ ಪಂದ್ಯ ಜ.26 ರಿಂದ ಆರಂಭವಾಗಲಿದ್ದು, ಈ ಪಂದ್ಯಕ್ಕಾಗಿ ಚೇತೇಶ್ವರ ಪೂಜಾರ ಹಾಗೂ ರೋಹಿತ್ ಶರ್ಮಾ ಅವರನ್ನು ರಾಷ್ಟ್ರೀಯ ತಂಡದಿಂದ ಕೈಬಿಡಲಾಗುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಮುಂಬೈ ಹಾಗೂ ಸೌರಾಷ್ಟ್ರ ತಂಡಗಳ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಈ ಇಬ್ಬರು ಆಟಗಾರರನ್ನು ರಣಜಿ ಫೈನಲ್ ಪಂದ್ಯಕ್ಕಾಗಿ ರಾಷ್ಟ್ರೀಯ ತಂಡದಿಂದ ಬಿಡಲಾಗುವುದು ಎಂಬ ವರದಿಯನ್ನು ಬಿಸಿಸಿಐ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಪೂಜಾರ, ಜಡೇಜಾ ಹಾಗೂ ರೋಹಿತ್ ಈ ಮೂರು ಆಟಗಾರರಲ್ಲಿ ಯಾವುದೇ ಆಟಗಾರರನ್ನು ರಣಜಿ ಪಂದ್ಯಕ್ಕಾಗಿ ರಾಷ್ಟ್ರೀಯ ತಂಡದಿಂದ ಬಿಡಲಾಗುವುದಿಲ್ಲ. ಇಂಗ್ಲೆಂಡ್ ವಿರುದ್ಧ ಮೊಹಾಲಿ ಹಾಗೂ ಧರ್ಮಶಾಲಾದಲ್ಲಿ ನಡೆಯಲಿರುವ ನಾಲ್ಕನೇ ಹಾಗೂ ಐದನೇ ಪಂದ್ಯದ ವೇಳೆ ಈ ಆಟಗಾರರು ತಂಡದ ಜತೆಯಲ್ಲಿರುತ್ತಾರೆ ಎಂದು ಬಿಸಿಸಿಐ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.