ಮೆಲ್ಬರ್ನ್: ವಿಶ್ವದ ಏಳನೇ ಶ್ರೇಯಾಂಕದಲ್ಲಿರುವ ಫ್ರಾನ್ಸ್‌ನ ಜೋ-ವಿಲ್‌ಫ್ರೆಡ್ ಸೋಂಗಾ ಅವರು ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಸೋಮವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು, ಫ್ರಾನ್ಸ್‌ನವರೇ ಆದ ರಿಚರ್ಡ್ ಗ್ಯಾಸ್ಕೆಟ್ ಅವರನ್ನು 6-3, 3-6, 6-3, 6-2 ಅಂತರದಲ್ಲಿ ಸೋಲಿಸಿ ಪಂದ್ಯಾವಳಿಯ ಎಂಟರ ಘಟ್ಟವನ್ನು ತಲುಪಿದರು.
ಚಾರ್ಡಿಗೆ ಜಯ: ಸೋಮವಾರ ನಡೆದ ಪುರುಷರ ಸಿಂಗಲ್ಸ್‌ನ ಮತ್ತೊಂದು ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚಾರ್ಡಿ ಅವರು, ಇಟಲಿಯ ಆಂಡ್ರಿಯಾಸ್ ಸೆಪ್ಪಿ ಅವರ ವಿರುದ್ಧ 5-7, 6-3, 6-2, 6-2 ಅಂತರದಲ್ಲಿ ಜಯ ಸಾಧಿಸಿದರು.