ಕ್ರೀಡೆ

'ಹಾಕಿಗೆ ಹಿಂದಿನ ವೈಭವ ಬರಲಿದೆ'

ಲಕ್ನೌ: ಐದು ತಂಡಗಳನ್ನೊಳಗೊಂಡ ಎಚ್‌ಐಎಲ್ ಪಂದ್ಯಾವಳಿಯು ಹಾಕಿ ಕ್ರೀಡೆಗೆ ಈ ಹಿಂದಿನ ವೈಭವವನ್ನು ತರಲಿದೆ ಎಂದು ಭಾರತ ಹಾಕಿ ತಂಡದ ನಾಯಕ ಹಾಗೂ ಎಚ್‌ಐಎಲ್‌ನ ಡೆಲ್ಲಿ ತಂಡದ ಮುಂದಾಳತ್ವ ವಹಿಸಿರುವ ಸರ್ದಾರ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ. ಈ ಹಿಂದೆ ಪ್ರಿಮಿಯರ್ ಹಾಕಿ ಲೀಗ್ ತಮ್ಮನ್ನು ಸೇರಿದಂತೆ ಹಲವಾರು ಇತರೆ ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶ ಕಲ್ಪಿಸಿಕೊಟ್ಟಿದ್ದು, ಇದಕ್ಕೆ ಎಚ್‌ಐಎಲ್ ಹೊಸ ರೂಪ ನೀಡಲಿದೆ ಎಂದು ಸರ್ದಾರ್ ತಿಳಿಸಿದರು. ಈ ಪಂದ್ಯಾವಳಿಯಲ್ಲಿ ಜ್ಯಾಮಿ ಡ್ವೇರ್ ತೈನ್ ಡೆ ನ್ಯೂಜೆರ್ ಅವರಂತಹ ವಿಶ್ವದ ಪ್ರಮುಖ ಆಟಗಾರರು ಭಾಗವಹಿಯುತ್ತಿದ್ದು, ಈ ಪಂದ್ಯಾವಳಿ ವಿಶ್ವದ ಹಾಕಿ ಪಂದ್ಯಾವಳಿಗಳಲ್ಲಿ ಉತ್ತಮ ಪಂದ್ಯಾವಳಿಯಾಗಿದೆ ಎಂದು ಅವರು ತಿಳಿಸಿದರು. ಎಚ್‌ಐಎಲ್‌ನಲ್ಲಿ ಸುಮಾರು 50 ಒಲಿಂಪಿಯನ್ಸ್ ಹಾಗೂ ಎಲ್ಲಾ ಹಿರಿಯ ಆಟಗಾರರು ಭಾಗವಹಿಸುತ್ತಿದ್ದಾರೆ. ಹಾಲೆಂಡ್, ಜರ್ಮನಿ ಮತ್ತು ಆಸ್ಟ್ರೇಲಿಯಾದ ಪ್ರಮುಖ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ಇಂತಹ ಆಟಗಾರರ ಜತೆ ಆ ಡುವ ಅವಕಾಶ ಸಿಗುವುದು ಕೇವಲ ದೊಡ್ಡ ಪಂದ್ಯಾವಳಿಗಳಲ್ಲಿ ಮಾತ್ರ. ಈ ಅವಕಾಶಗಳಿಂದ ನಮ್ಮ ಆಟಗಾರರಿಗೆ ಕಲಿಯಲು ಹೆಚ್ಚಿನ ಅವಕಾಶ ಸಿಗಲಿದೆ ಎಂದು ಸರ್ದಾರ್ ಅಭಿಪ್ರಾಯ ಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!