ಕ್ರೀಡೆ

ಐಸಿಸಿ-ಬಿಸಿಸಿಐ ವಿರುದ್ಧ ಪ್ರತಿಭಟನೆ

ಭುವನೇಶ್ವರ್: ಮುಂಬರುವ ಮಹಿಳಾ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಪಾಕಿಸ್ತಾನ ತಂಡದ ಪಂದ್ಯಗಳನ್ನು ನಡೆಸಲು ಒಡಿಶಾ ಸರ್ಕಾರ ಅನುಮತಿ ನೀಡಿರುವ ಹಿನ್ನಲೆಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಮಂಗಳವಾರ ಐಸಿಸಿ-ಬಿಸಿಸಿಐ ಅಧಿಕಾರಿಗಳ ಸಭೆ ನಡೆಯುವ ವೇಳೆ ಪ್ರತಿಭಟನೆ ನಡೆಸಲಾಗಿದೆ.
ಕಟಕ್‌ನಲ್ಲಿ ಪಾಕಿಸ್ತಾನ ತಂಡಗಳ ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿರುವುದನಮ್ನು ಖಂಡಿಸಿ ಭಜರಂಗಧಳ ಸಂಘಟನೆಯು ಗುರುವಾರ ಬಂದ್‌ಗೆ ಕರೆ ನೀಡಿದೆ.
ಅಧಿಕಾರಿಗಳ ವಿರುದ್ಧ ಸಂಘ ಪರಿವಾರ, ಕಳಿಂಗ ಸೇನೆ ಮತ್ತು ಉತ್ಕಾಲ್ ಭಾರತ್ ಸಂಘಟನೆಗಳು ಪ್ರತಿಭಟನೆ ನಡೆಸಿದೆ. ಈ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಆಯುಕ್ತರ ಮುಖ್ಯ ಕಚೇರಿ ಮತ್ತು ಆಟಗಾರರು ತಂಗುವ ತಾರಾ ಹೊಟೆಲ್‌ಗಳು ಸೇರಿದಂತೆ ಕಟಕ್ ಹಾಗೂ ಭುವನೇಶ್ವರದ ಹಲವೆಡೆಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಈ ಸಂಘಟನೆಯ ಪ್ರತಿಭಟನಾನಿರತ 10 ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಎಸಿಪಿ ನಿಹಾರ್ ದಾಸ್ ತಿಳಿಸಿದ್ದಾರೆ.
ಐಸಿಸಿ-ಬಿಸಿಸಿಐ ಅಧಿಕಾರಿಗಳು ರಾಜ್ಯ ಸರ್ಕಾರವನ್ನು ಭೇಟಿ ಮಾಡಿ, ಬಾರಾಭತಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ತಂಡದ ಪಂದ್ಯಗಳನ್ನು ನಡೆಸಲು ಸಹಕಾರವನ್ನು ಕೇಳಿದೆ ಎಂದು ಕ್ರೀಡಾ ಕಾರ್ಯದರ್ಶಿ ಐ. ಶ್ರೀನಿವಾಸನ್ ತಿಳಿಸಿದರು.
ಈ ಅಧಿಕಾರಿಗಳು ಕಟಕ್ ಕ್ರೀಡಾಂಗಣಕ್ಕೆ ಭೇಟಿ ನೀಡುವ ಮುನ್ನ, ರಾಜ್ಯ ಸರ್ಕಾರದ ಗೃಹ ಕಾರ್ಯದರ್ಶಿ ಯು.ಎನ್ ಬೆಹ್ರಾ ಹಾಗೂ ಪೊಲೀಸ್ ಮಹಾ ನಿರ್ದೇಶಕರಾದ ಪ್ರಕಾಶ್ ಮಿಶ್ರ ಅವರನ್ನು ಭೇಟಿ ಮಾಡಿದ್ದಾರೆ.
ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ತಂಡದ ಆಟಗಾರರಿಗೆ ಸಂಪೂರ್ಣ ಭದ್ರತೆ ನಿಡಬೇಕೆಂದು ಮನವಿ ಮಾಡಿದ್ದಾರೆ ಎಂದು ಗೃಹ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರವು ವಿಶ್ವಕಪ್ ಪಂದ್ಯಾವಳಿಗೆ ತಮ್ಮ ಸಹಾಯವನ್ನು ನೀಡಲು ತಿಳಿಸಿದ್ದು, ರಾಜ್ಯ ಸರ್ಕಾರಕ್ಕೆ ಅಭಿನಂಧನೆ ಸಲ್ಲಿಸುತ್ತೇನೆ ಎಂದು ಮಹಿಳಾ ವಿಶ್ವಕಪ್ ಪಂದ್ಯಾವಳಿಯ ನಿರ್ದೇಶಕರಾದ ಸುರು ನಾಯಕ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!