ಕ್ರೀಡೆ

ಕ್ವಾರ್ಟರ್ ಫೈನಲ್‌ಗೆ ಭೂಪತಿ-ಪೆಟ್ರೊವಾ

ಮೆಲ್ಬರ್ನ್: ಭಾರತದ ಟೆನಿಸ್ ಆಟಗಾರ ಮಹೇಶ್ ಭೂಪತಿ, ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್‌ನ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಮಂಗಳವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಹೇಶ್ ಭೂಪತಿ ಹಾಗೂ ನಾದಿಯಾ ಪೆಟ್ರೊವಾ ಜೋಡಿ, ಕೆಟರಿನಾ ಸ್ರೆಬಾತ್ನಿಕ್ ಹಾಗೂ ನೆನಾದ್ ಜಿಮಾಂಜಿಕ್ ಜೋಡಿ ವಿರುದ್ಧ 3-6, 6-2, 10-5 ಅಂತರದಲ್ಲಿ ಸೋಲಿಸಿ, ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿತು.
ವಿಶ್ವದ ಐದನೇ ಶ್ರೇಯಾಂಕದಲ್ಲಿರುವ ಭಾರತ-ರಷ್ಯಾ ಜೋಡಿ ಮೊದಲ ಸೆಟ್‌ನಲ್ಲಿ ಸ್ಲೊವಾಕಿಯಾ- ಸರ್ಬಿಯಾ ಜೋಡಿ ವಿರುದ್ಧ ಸೋಲು ಕಂಡಿತ್ತು. ಆದರೆ, ಎರಡನೇ ಹಾಗೂ ಮೂರನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಭೂಪತಿ-ಪೆಟ್ರೊವಾ, ಉತ್ತಮ ಆಟ ಪ್ರದರ್ಶಿಸಿತು. ಎದುರಾಳಿಗಳ ಮೇಲೆ ಎರಡೂ ಸೆಟ್‌ಗಳಲ್ಲಿ ಹಿಡಿತ ಸಾಧಿಸಿದ ಇಬ್ಬರೂ, ಪಂದ್ಯವನ್ನು ಗೆಲ್ಲುವಲ್ಲಿ ಸಫಲರಾದರು. ಮೂರನೇ ಸೆಟ್‌ನಲ್ಲಿ ಎರಡೂ ಜೋಡಿಗಳ ಆಟ ಕುತೂಹಲ ಮೂಡಿಸಿತ್ತು. ಮುನ್ನಡೆ ಸಾಧಿಸುತ್ತಾ ಸಾಗಿದ ಮಹೇಶ್ ಭೂಪತಿ- ನಾದಿಯಾ ಪೆಟ್ರೊವಾ ಜೋಡಿಗೆ ತೀವ್ರ ಪ್ರತಿಸ್ಪರ್ಧೆ ನೀಡಿದ ಕೆಟರಿನಾ-ನೆನಾದ್, ಭಾರತ-ರಷ್ಯಾ ಜೋಡಿ ಗಳಿಸುತ್ತಿದ್ದ ಮುನ್ನಡೆಯ ನೆರಳಿನಂತೆ ತಮ್ಮ ಗೇಮ್‌ಗಳನ್ನೂ ಹೆಚ್ಚಿಸಿಕೊಳ್ಳುತ್ತಾ ಸಾಗಿದರು. ಹೀಗಾಗಿ, ಈ ಸೆಟ್ 10-5ರವರೆಗೆ ವಿಸ್ತಾರಗೊಂಡಿತು. ಆದರೂ, ಮಿಂಚಿನ ಆಟವಾಡಿದ ಭೂಪತಿ-ಪೆಟ್ರೊವಾ, ಈ ಸೆಟ್‌ನೊಂದಿಗೆ ಪಂದ್ಯದಲ್ಲೂ ಜಯ ಸಾಧಿಸಿತು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಭೂಪತಿ ಹಾಗೂ ಲಿಯಾಂಡರ್ ಪೇಸ್ ಮುಖಾಮುಖಿಯಾಗುವ ಸಾಧ್ಯತೆಗಳಿವೆ.
ಪೇಸ್-ಭೂಪತಿ ಮುಖಾಮುಖಿ?: ಮಿಶ್ರಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಹಾಗೂ ಅವರ ಜೊತೆಗಾರ್ತಿಯಾದ ರಷ್ಯಾದ ಎಲಿನಾ ವೆಸ್ನಿನಾ ಅವರಿಬ್ಬರೂ, ಆಸ್ಟ್ರೇಲಿಯಾದ ಜಾರ್ಮಿಲಾ ಹಾಗೂ ಮ್ಯಾಥ್ಯೂ ಎಬ್ಡೆನ್ ವಿರುದ್ಧ  ಎರಡನೇ  ಸುತ್ತಿನ ಪಂದ್ಯದಲ್ಲಿ ಸೆಣೆಸಲಿದ್ದಾರೆ. ಈ ಪಂದ್ಯದಲ್ಲಿ ಪೇಸ್-ವೆಸ್ನಿನಾ ಗೆದ್ದರೆ, ಅವರು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಲಿದ್ದು, ಹಾಗೇನಾದರೂ ಅವರು ಕ್ವಾರ್ಟರ್ ಫೈನಲ್ ಕಾಲಿಟ್ಟಿದ್ದೇ ಆದಲ್ಲಿ ಅಲ್ಲಿ ಈ ಜೋಡಿ ಮಹೇಶ್ ಭೂಪತಿ- ಪೆಟ್ರೊವಾ ಜೋಡಿಯನ್ನು ಎದುರಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ