ಕ್ರೀಡೆ

ಸೆಮೀಸ್‌ಗೆ ಶರಪೊವಾ

ಮೆಲ್ಬರ್ನ್: ಖ್ಯಾತ ಟೆನಿಸ್ ತಾರೆ ಮಾರಿಯಾ ಶರಪೊವಾ ಅವರು ಆಸ್ಟ್ರೇಲಿಯನ್ ಓಪನ್‌ನ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ತಲುಪಿದ್ದಾರೆ. ವಿಶ್ವ ಟೆನಿಸ್ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಅವರು ಮಂಗಳವಾರ ನಡೆದ ಪಂದ್ಯದಲ್ಲಿ ರಷ್ಯಾದ ಎಕಾಟೇರಿಯಾ ಮಕಾರೋವಾ ಅವರ ವಿರುದ್ಧ 6-2, 6-2 ಅಂತರದಲ್ಲಿ ಸೋಲಿಸಿ, ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.
ಮೊದಲ ಸೆಟ್‌ನ ಆರಂಭದಿಂದಲೂ ಎದುರಾಳಿಯ ಮೇಲೆ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಶರಪೊವಾ ಅವರು, ಮಿಂಚಿನ ಆಟ ಪ್ರದರ್ಶಿಸಿದರು. ಅತ್ತ, ಮಕಾರೋವಾ ಅವರೂ ಸುಲಭವಾಗಿ ಸೋಲೊಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅವರೂ ಶರಪೊವಾ ಅವರಿಗೆ ಅಲ್ಲಲ್ಲಿ ತಿರುಗೇಟು ನೀಡಿದರು. ಆದರೆ, ಅವರ ಆಟ ಶರಪೊವಾ ಅವರ ಆಟದಷ್ಟು ಮೊನಚಾಗಿರಲಿಲ್ಲ. ಅಂತಿಮವಾಗಿ ಮಕಾರೋವಾ ಅವರು ಶರಪೊವಾ ವಿರುದ್ಧ 6-2 ಅಂತರದಲ್ಲಿ ಸೋತರು.
ಇನ್ನು, ದ್ವಿತೀಯ ಸೆಟ್‌ನಲ್ಲಿ ಶರಪೊವಾ ಅವರದ್ದೇ ಕೈ ಮೇಲಾಯಿತು. ಪ್ರತಿ ಹಂತದಲ್ಲೂ ಮಕಾರೋವಾ ಅವರಿಗೆ ಸವಾಲಾಗಿ ಪರಿಣಮಿಸಿದ ಶರಪೊವಾ, ತಮ್ಮ ಎಂದಿನ ಉತ್ತಮ ಆಟ ಪ್ರದರ್ಶಿಸಿದರು. ಆದರೆ, ಅತ್ತ ಮಕಾರೋವಾ ಅವರ ಕಡೆಯಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ. ಕೊನೆಗೆ, ಈ ಸೆಟ್‌ನಲ್ಲಿ ಶರಪೊವಾ ಬೇಗನೇ ಜಯ ಸಾಧಿಸಿದರು.
ಸೆಮೀಸ್‌ನಲ್ಲಿ ಲೀ ಎದುರಾಳಿ: ಸೆಮಿಫೈನಲ್‌ನಲ್ಲಿ ಮಾರಿಯಾ ಶರಪೊವಾ ಅವರಿಗೆ ಚೀನಾದ ಲೀ ಅವರು ಎದುರಾಳಿಯಾಗಲಿದ್ದಾರೆ. ಮಂಗಳವಾರ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು, ಅಗ್ನಿಸ್ಕಾ ರಾಡ್‌ವಾನ್‌ಸ್ಕಾ ಅವರನ್ನು ಸೋಲಿಸಿ, ಸೆಮಿಫೈನಲ್‌ಗೆ ಕಾಲಿಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

ವೃತ್ತಿ ಜೀವನದ ಬಹು ದೊಡ್ಡ ಕನಸನ್ನು ರಿವೀಲ್ ಮಾಡಿದ ವೈಭವ್ ಸೂರ್ಯವಂಶಿ! Video

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!