ಮೊಹಾಲಿ: ಭಾರತ ತಂಡದ ನಾಯಕ ಮದೇಂದ್ರ ಸಿಂಗ್ ಧೋನಿ ಮಂಗಳವಾರ ಅಭ್ಯಾಸ ವೇಳೆ ತಮ್ಮ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದು, ನಂತರ ಅವರ ಪರಿಸ್ಥಿತಿ ಉತ್ತಮವಾಗಿದ್ದು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಂಡದ ಫಿಸಿಯೋ ತಿಳಿಸಿದರು.
ಮಂಗಳವಾರ ಬೆಳಗ್ಗೆ ಇಂಗ್ಲೆಂಡ್ ತಂಡ ಅಭ್ಯಾಸ ನಡೆಸಿದ್ದು, ನಂತರ ಮಧ್ಯಾಹ್ನ ಭಾರತ ತಂಡ ತಮ್ಮ ಅಭ್ಯಾಸ ಆರಂಭಿಸಿತು. ನಾಯಕ ಧೋನಿ ವೇಗದ ಬೌಲರ್ ಮನ್‌ಪ್ರೀತ್ ಗೋನಿ ಎಸೆದ ಎಸೆತವನ್ನು ಎದುರಿಸಿದ ಧೋನಿ ತಮ್ಮ ಹೆಬ್ಬೆರಳಿಗೆ ಗಾಯ ಮಾಡಿಕೊಂಡರು.
ಚೆಂಡು ಧೋನಿಯವರ ಹೆಬ್ಬೆರಳಿಗೆ ಬಲವಾಗಿ ಬೀಳುತ್ತಿದ್ದಂತೆ ಧೋನಿ ಸ್ಥಳದಲ್ಲೇ ಕುಳಿತರು ತಕ್ಷಣ ಸ್ಥಳಕ್ಕೆ ಆಗಮಿಸಿದ ಫಿಸಿಯೋ ಧೋನಿಯವರಿಗೆ ಚಿಕಿತ್ಸೆ ನೀಡಿದರು. ಕೆಲ ಹೊತ್ತಿನ ನಂತರ ಧೋನಿಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ ಫಿಸಿಯೋ ಧೋನಿಗೆ ಸಣ್ಣ ಪ್ರಮಾಣದಲ್ಲಿ ಗಾಯಾವಾಗಿದ್ದು, ಹೆಚ್ಚಿನ ತೊಂದರೆ ಇಲ್ಲ ಎಂದು ತಿಳಿಸಿದರು.