ನವದೆಹಲಿ: ಚೊಚ್ಚಲ ಹಾಕಿ ಇಂಡಿಯಾ ಲೀಗ್ ತನ್ನ ಪ್ರಸಾರಕರಿಗೆ ಉತ್ತಮ ಫಲಿತಾಂಶವನ್ನು ನೀಡಿದೆ. ಈ ಪಂದ್ಯಾವಳಿಯ ಮೊದಲ ಆರು ಪಂದ್ಯಗಳನ್ನು 1.46 ಕೋಟಿ ಜನ ವಿಕ್ಷಣೆ ಮಾಡಿದ್ದು, ಈ ಮೂಲಕ ಎಚ್‌ಐಎಲ್ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.
ಸಂಶೋಧನಾ ಸಂಸ್ಥೆಯಾಗಿರುವ ಟ್ಯಾಮ್ ಕಲೆಹಾಕಿರುವ ದತ್ತಾಂಶ ಪ್ರಕಾರ ಎಚ್‌ಐಎಲ್ ಪಂದ್ಯಗಳನ್ನು 1.46 ಕೋಟಿ ಜನ ವಿಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಮೂಲಕ ದೇಶದಲ್ಲಿ ಇಷ್ಟು ಪ್ರಮಾಣದ ವಿಕ್ಷಕರನ್ನು ಪಡೆದ ಮೊದಲ ಪಂದ್ಯಾವಳಿ ಇದಾಗಿದೆ. ವರ್ಲ್ಡ್ ಸೀರೀಸ್ ಹಾಕಿ ಪಂದ್ಯಾವಳಿಯ ಮೊದಲ ವಾರಾಂತ್ಯಕ್ಕೆ 0.63 ಕೋಟಿ ಜನರು ವಿಕ್ಷಣೆ ಮಾಡಿದ್ದರು. 2012ರಲ್ಲಿ ನಡೆದ ಪುರುಷರ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಪೂರ್ಣಾವಧಿ ವೇಳೆಗೆ 0.58 ಕೋಟಿ ಜನ ವೀಕ್ಷಣೆ ಮಾಡಿದ್ದರು.