ಲಖ್ನೌ: ಎಸ್. ವಿ ಸುನಿಲ್ ದಾಖಲಿಸಿದ ಎರಡು ಗೋಲುಗಳ ನೆರವಿನೊಂದಿಗೆ ಜೇಪಿ ಪಂಜಾಬ್ ವಾರಿಯರ್ಸ್ ತಂಡ ಇಂಡಿಯಾನ್ ಹಾಕಿ ಲೀಗ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಅತಿಥೇಯ ಉತ್ತರಪ್ರದೇಶ ವಿಜಾರ್ಡ್ಸ್ ತಂಡವನ್ನು 4-3 ಗೋಲುಗಳಿಂದ ಸೋಲಿಸಿತು.
ಈ ಜಯದೊಂದಿಗೆ ಪಂಜಾಬ್ ತಂಡ ಒಟ್ಟು ಏಳು ಪಂದ್ಯಗಳಿಂದ 20 ಅಂಕಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. 27 ಅಂಕ ಗಳಿಸಿರುವ ಡೆಲ್ಲಿ ವೇವ್ ರೈಡರ್ಸ್ ತಂಡ ಅಗ್ರ ಸ್ಥಾನದಲ್ಲಿದ್ದರೆ, 22 ಅಂಕಗಳನ್ನು ಗಳಿಸಿರುವ ರಾಂಚಿ ರೋಹಿನ್ಸ್ 2ನೇ ಸ್ಥಾನದಲ್ಲಿದೆ.
ಉತ್ತರಪ್ರದೇಶ ವಿಜಾರ್ಡ್ಸ್ ತಂಡ ಏಳು ಪಂದ್ಯಗಳಲ್ಲಿ 17 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.