ಕ್ರೀಡೆ

'ಯಾವುದೇ ಗ್ರಾನ್ ಸ್ಲ್ಯಾಮ್ ಗೆಲ್ಲಬಲ್ಲೆ'

ಮೆಲ್ಬರ್ನ್: ಸತತ ಎರಡನೇ ಬಾರಿಗೆ ಆಸ್ಟ್ರೇಲಿಯಾ ಓಪನ್ ಟೆನಿಸ್ ಚಾಂಪಿಯನ್‌ಷಿಪ್ ಗೆದ್ದ ಬೆಲಾರಷ್ಯಾದ ವಿಕ್ಟೋರಿಯಾ ಅಜರೆಂಕಾ ಅವರಿಗೆ ಅತೀವ ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರಂತೆ. ಈಗ ಯಾವುದೇ ಗ್ರಾನ್ ಸ್ಲ್ಯಾಮ್ ಗೆಲ್ಲಬಲ್ಲೇ ಎಂಬ ವಿಶ್ವಾಸ ಮೂಡಿದೆಯಂತೆ. ಹಾಗಂತಾ ಅವರೇ ಹೇಳಿಕೊಂಡಿದ್ದಾರೆ. ಶನಿವಾರ ನಡೆದ ಆಸ್ಟ್ರೇಲಿಯಾ ಓಪನ್ ಫೈನಲ್ ಪಂದ್ಯದಲ್ಲಿ ಚೀನಾದ ಲೀ ನಾ ವಿರುದ್ಧ ಗೆದ್ದ ನಂತರ ಸಂಭ್ರಮ ಆಚರಿವುದರೊಂದಿಗೆ ಮಾಧ್ಯಮದೊಂದಿಗೆ ಅಜರೆಂಕಾ ತಮ್ಮ ಅನಿಸಿಕೆ ಹಂಚಿಕೊಂಡರು.
'ಈ ಪಂದ್ಯಾವಳಿಯ ನಂತರ ಇಂತಹದ್ದೇ ಗ್ರಾನ್ ಸ್ಲ್ಯಾಮ್ ಗೆಲ್ಲಬೇಕು ಎಂದು ತೀಮಾರ್ನಿಸಿಲ್ಲ. ಗೆಲ್ಲುವುದು ಮಾತ್ರ ನನ್ನ ಗುರಿ. ಅಲ್ಲದೆ ಹಿಂದಿನ ಅಂಕಿ ಸಂಖ್ಯೆಗಳನ್ನು ನೋಡಬಯಸುವುದಿಲ್ಲ. ಯಾವುದೇ ಪ್ರಮುಖ ಪಂದ್ಯಾವಳಿಯಲ್ಲಿ ಗೆಲ್ಲುವ ಆಶಯವನ್ನು ನಾನು ಹೊಂದಿದ್ದೇನೆ' ಎಂದು ಅಜರೆಂಕಾ ಹೇಳಿದರು.
ಆದರೆ, ಅಜರೆಂಕಾ ಆಸ್ಟ್ರೇಲಿಯಾ ಓಪನ್ ಸೆಮಿಫೈನಲ್ ಪಂದ್ಯದ ಮಹತ್ವದ ಸಮಯದಲ್ಲಿ ವೈದ್ಯಕೀಯ ಸೇವೆ ಪಡೆಯುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video