ಚೆನ್ನೈ: ಭಾನುವಾರ ಮುಕ್ತಾಯಗೊಂಡ ಡಾನ್ಬಾಸ್ಕೋ ಮ್ಯಾಕ್ ಫರಾನ್ ಆಲ್ ಇಂಡಿಯಾ ಫುಟ್ಬಾಲ್ ಪಂದ್ಯಾವಳಿಯನ್ನು ಬೆಂಗಳೂರಿನ ಬಿಡಿಎಫ್ಎ ಇಲೆವೆನ್ ತಂಡ ಗೆದ್ದುಕೊಂಡಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬಿಡಿಎಫ್ಎ ಇಲೆವೆನ್ ತಂಡ ಚೆನ್ನೈ ತಂಡವನ್ನು 2-0 ಅಂತರದಲ್ಲಿ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಬಿಡಿಎಫ್ಎನ ಶ್ರೀಧರ್ 61 ಹಾಗೂ 63ನೇ ನಿಮಿಷದಲ್ಲಿ ಗೋಲು ಗಳಿಸಿದರು.