ಮೆಲ್ಬರ್ನ್: ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ಅವರನ್ನು ಪರಾಭವಗೊಳಿಸಿದ ಸರ್ಬಿಯಾದ ನೋವಾಕ್ ಜೊಕೊವಿಚ್ ಅವರು ಸತತ 3ನೇ ಬಾರಿಗೆ ಆಸ್ಟ್ರೇಲಿಯಾ ಓಪನ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು.
ಪಂದ್ಯದ ಮೊದಲ ಸೆಟ್‌ನ ಟೈ ಬ್ರೇಕರ್‌ನಲ್ಲಿ ಕೈಚೆಲ್ಲಿದ ವಿಶ್ವದ ನಂ.1 ಆಟಗಾರ ಜೊಕೊವಿಚ್, ನಂತರ ಸತತ ಮೂರು ಸೆಟ್‌ಗಳಲ್ಲಿ ಜಯ ಸಾಧಿಸುವ ಮೂಲಕ 3 ಗಂಟೆ 40 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮರ್ರೆ ಅವರನ್ನು 6-7 (2/7), 7-6 (7/3), 6-3, 6-2 ಸೆಟ್‌ಗಳ ಅಂತರದಿಂದ ಮಣಿಸಿದರು.
ಜೊಕೊವಿಚ್ ಅವರಿಗೆ ಇದು ನಾಲ್ಕನೇ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿಯಾಗಿದ್ದು, ಒಟ್ಟು 6ನೇ ಗ್ರಾನ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ.
25 ವರ್ಷದ ಜೊಕೊವಿಚ್ ಸಮಕಾಲಿನ ಆಟಗಾರರಲ್ಲಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲ ಟೆನಿಸ್ ತಾರೆ ಎನಿಸಿದ್ದಾರೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಜಾಕ್ ಕ್ರಾಫೋರ್ಡ್ (1931-33) ಮತ್ತು ರಾಯ್ ಎಮರ್ಸನ್ (1963-67) ಆಸ್ಟ್ರೇಲಿಯಾ ಓಪನ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ್ದರು.
'ಸತತ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿರುವುದು ನನಗೆ ಸೋಜಿಗವೆನಿಸುತ್ತಿದೆ. ಅಲ್ಲದೆ, ಆಸ್ಟ್ರೇಲಿಯಾ ಓಪನ್ ನನ್ನ ಫೇವರಿಟ್ ಮತ್ತು ಯಶಸ್ಸು ಸಾಧಿಸಿದ ಗ್ರಾನ್ ಸ್ಲ್ಯಾಮ್ ಆಗಿದೆ. ಈ ಟೆನಿಸ್ ಕೋರ್ಟ್‌ನಲ್ಲಿ ಆಡಲು ನಾನು ಸಂತಸಪಡುತ್ತೇನೆ' ಎಂದು ಪಂದ್ಯದ ನಂತರ ಜೊಕೊವಿಚ್ ಹೇಳಿದರು.
ವಿಶ್ವದ ನಂ.3 ಆಟಗಾರ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ಅವರು ಮೊದಲ ಸೆಟ್‌ನಲ್ಲಿ ಬಲಿಷ್ಠ ಹೋರಾಟ ನಡೆಸುವ ಮೂಲಕ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಆದರೆ, ಸ್ನಾಯು ಸೆಳತಕ್ಕೊಳಗಾದ ಮರ್ರೆಗೆ ನಂತರ ಅದೇ ರೀತಿಯ ಹೊರಾಟ ನಡೆಸಲು ಸಾಧ್ಯವಾಗಲಿಲ್ಲ. ಇದು ಜೊಕೊವಿಚ್ ಸುಲಭ ಜಯಕ್ಕೆ ನೆರವಾಯಿತು.
“«æàÞÈÛOé ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಜೊಕೊವಿಚ್ ಇಲ್ಲಿ ಮಾಡಿರುವ ದಾಖಲೆ ಅಚ್ಚರಿ ಮೂಡಿಸಿತ್ತದೆ. ಕೆಲವೇ ಆಟಗಾರರಿಂದ ಈ ಸಾಧನೆ ಮಾಡಲು ಸಾಧ್ಯ. ಚಾಂಪಿಯನ್ ಪಟ್ಟ ಧರಿಸಲು ಜೊಕೊವಿಚ್ @ÔÚ%ÁÛW¥Û§Áæ’ ಎಂದು ಮರ್ರೆ ಹೇಳಿದರು.
ಗ್ರಾನ್ ಸ್ಲ್ಯಾಮ್ ಪಂದ್ಯಾವಳಿಗಳಲ್ಲಿ ಮರ್ರೆ ವಿರುದ್ಧ ಜೊಕೊವಿಚ್‌ಗೆ ಇದು ಎರಡನೇ ಜಯವಾಗಿದೆ. ಇದಕ್ಕೂ ಮುನ್ನ 2011ರ ಆಸ್ಟ್ರೇಲಿಯಾ ಓಪನ್ ಫೈನಲ್ ಪಂದ್ಯದಲ್ಲಿ ಜೊಕೊವಿಚ್ ವಿರುದ್ಧ ಮರ್ರೆ ಕೈಚೆಲ್ಲಿದ್ದರು. ಇದರೊಂದಿಗೆ ಜೊಕೊವಿಚ್ ಪ್ರಮುಖ ಪಂದ್ಯಾವಳಿಗಳಲ್ಲಿ ಸತತ 13ನೇ ಜಯ ದಾಖಲಿಸಿದರು. ಜೊಕೊವಿಚ್ ಅವರಿಗೆ ಮಾಜಿ ಟೆನಿಸ್ ತಾರೆ ಆ್ಯಂಡ್ರಿ ಆಗಾಸಿ ಪ್ರಶಸ್ತಿ ನೀಡಿದರು. ರ್ಯಾಂಕಿಂಗ್‌ನಲ್ಲಿ ಜೊಕೊವಿಚ್ ನಂ.1 ಸ್ಥಾನದಲ್ಲಿದ್ದರೆ, ರೋಜರ್ ಫೆಡರರ್ 2ನೇ ಸ್ಥಾನ ಹಾಗೂ ಆ್ಯಂಡಿ ಮರ್ರೆ 3ನೇ ಸ್ಥಾನದಲ್ಲಿದ್ದಾರೆ.