ನವದೆಹಲಿ: ಪ್ರಸಕ್ತ ನಡೆಯುತ್ತಿರುವ ಹಾಕಿ ಇಂಡಿಯಾ ಲೀಗ್ (ಎಚ್‌ಐಎಲ್) ಪಂದ್ಯಾವಳಿಯಲ್ಲಿ ಜಯ ಗಳಿಸುವ ತಂಡಕ್ಕೆ ಬಹುಮಾನವಾಗಿ ರು. 2.50 ಕೋಟಿ ನೀಡುವುದಾಗಿ ಎಚ್‌ಐಎಲ್ ಆಡಳಿತ ಮಂಡಳಿ ಸೋಮವಾರ ಪ್ರಕಟಿಸಿದೆ. ಇನ್ನು, ರನ್ನರ್ ಅಪ್ ತಂಡಕ್ಕೆ ರು. 1.25 ಕೋಟಿ, 3ನೇ ಸ್ಥಾನ ಪಡೆಯುವ ತಂಡಕ್ಕೆ ರು. 75 ಲಕ್ಷ ನೀಡುವುದಾಗಿ ಮಂಡಳಿ ಹೇಳಿದೆ. ಸೋಮವಾರ ಸುದ್ದಿಗಾರರಿಗೆ ಅಧಿಕೃತವಾಗಿ ಈ ವಿಷಯ ತಿಳಿಸಿದ ಎಚ್‌ಐಎಲ್ ಅಧ್ಯಕ್ಷ ನರಿಂದರ್ ಬಾತ್ರಾ, 'ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುವ ಆಟಗಾರನಿಗೆ ರು. 25 ಲಕ್ಷ, ಟ್ರೋಫಿ,ಉದ ಯೋನ್ಮುಖ ಆಟಗಾರ ಗೌರವ ಪಡೆಯುವ ಕ್ರೀಡಾಳುವಿಗೆ 'ಪಾಂಟಿ ಚಧಾ ಟ್ರೋಫಿ', ರು. 20 ಕೋಟಿ ನೀಡಲಾಗುವುದು' ಎಂದರು. ಅತಿ ಹೆಚ್ಚು ಗೋಲು ಗಳಿಸುವ ತಂಡಕ್ಕೆ ರು. 10 ಲಕ್ಷ ನೀಡಲಾಗುವುದು. ಹಸಿರು ಕಾರ್ಡ್, ಹಳದಿ ಕಾರ್ಡ್, ಕೆಂಪು ಕಾರ್ಡ್‌ಗಳನ್ನು ಅತಿ ಕಡಿಮೆ ಪಡೆದ ತಂಡಕ್ಕೆ 'ಫೇರ್ ಪ್ಲೇ ಟ್ರೋಫಿ'ಯನ್ನು ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.