ನವದೆಹಲಿ: ಅಖಿಲ ಭಾರತ ಫುಟ್ಬಾಲ್ ಫೆಡರೇಷನ್‌ನ 2ನೇ ಡಿವಿಷನ್ ಫುಟ್ಬಾಲ್ ಲೀಗ್ 2012-2013 ಪಂದ್ಯಾವಳಿಯಲ್ಲಿ ಭಾಗವಹಿಸಲು ಮೂರು ಹೊಸ ತಂಡಗಳಿಗೆ ಅನುಮತಿ ನೀಡಿದೆ. ಸಾಂಗ್ಬಾದ್ ಪ್ರತಿದಿನ್ ಭವಾನಿಪೋರ್ ಎಫ್‌ಸಿ ಪ್ರೈವೇಟ್ ಲಿಮಿಟೆಡ್, ಜೊಸ್ಕೋ ಎಫ್‌ಸಿ ಮತ್ತು ಲಾಂಗ್‌ಮೌಲ್ ಎಫ್‌ಸಿ ಕ್ಲಬ್‌ಗಳು ಹೊಸದಾಗಿ 2ನೇ ಡಿವಿಷನ್‌ಲೀಗ್‌ಗೆ ಸೇರ್ಪಡೆಯಾದ ಕ್ಲಬ್‌ಗಳಾಗಿವೆ. ಈ ಕ್ಲಬ್‌ಗಳು ಈ ಮುನ್ನವೇ ಈಮೇಲ್ ಮೂಲಕ ಅಗತ್ಯ ದಾಖಲಾತಿಗಳನ್ನು ಕಳುಹಿಸಿದ್ದವು. ಅಗತ್ಯ ಪ್ರಕ್ರಿಯೆ ಮುಕ್ತಾಯವಾದರೆ, ಈ ಬಾರಿಯ ಪಂದ್ಯಾವಳಿಯಲ್ಲೇ ಮೂರೂ ತಂಡಗಳು ಕಾಣಿಸಿಕೊಳ್ಳಲಿವೆ, ಲೀಗ್ ಮಾರ್ಚ್ ತಿಂಗಳಲ್ಲಿ ಆರಂಭವಾಗಲಿದೆ.