ಕ್ರೀಡೆ

ವೇಗ ಮತ್ತು ಸ್ವಿಂಗ್ ನನಗೆ ಮುಖ್ಯ: ಶಮಿ ಅಹ್ಮದ್

ನವದೆಹಲಿ: ವೇಗದ ಬೌಲಿಂಗ್ ನನಗೆ ಮುಖ್ಯ, ಲೈನ್ ಮತ್ತು ಲೆಂತ್‌ನ್ನು ನಾನು ಯಾವತ್ತೂ ಪರಿಗಣಿಸುವುದೇ ಇಲ್ಲ ಎಂದು ಭಾರತದ ಉದಯೋನ್ಮುಖ ವೇಗದ ಬೌಲರ್ ಶಮಿ ಅಹ್ಮದ್ ಬುಧವಾರ ಹೇಳಿದ್ದಾರೆ. 'ವೇಗ ಮತ್ತು ಸ್ವಿಂಗ್ ಬೌಲಿಂಗ್‌ನ ಮುಖ್ಯ ಅಂಶಗಳವಾಗಿವೆ. ಲೈನ್ ಮತ್ತು ಲೆಂತ್ ಎಂದರೆ ಏನು ಎಂಬುದು ನನಗೆ ಗೊತ್ತಿದೆ. ಆದರೆ, ವೇಗದ ಬೌಲಿಂಗ್ ಜತೆ ನಾನು ಯಾವತ್ತೂ ರಾಜಿಮಾಡಿಕೊಳ್ಳುವುದಿಲ್ಲ. ವೇಗದಲ್ಲೇ ನನ್ನ ಹೆಚ್ಚಿನ ಶಕ್ತಿ ಅಡಗಿದ್ದು, ಈ ಮಟ್ಟಕ್ಕೆ ಬೆಳೆಯಲೂ ಅದೇ ಮೂಲ ಕಾರಣವಾಗಿದೆ' ಎಂದು ಸಂದರ್ಶನವೊಂದರಲ್ಲಿ ಶಮಿ ಹೇಳಿದ್ದಾರೆ.
'ನನ್ನ ನಾಯಕ ನೀಡಿದ ಸಲಹೆಯಂತೆ ಉತ್ತಮ ಬೌಲಿಂಗ್ ಪ್ರದರ್ಶಿಸಲು ನಾನು ಪಂದ್ಯದಲ್ಲಿ ಯತ್ನಿಸಿದ್ದೇನೆ. ಪದಾರ್ಪಣೆ ಪಂದ್ಯದಲ್ಲೇ ಸತತ ನಾಲ್ಕು ಓವರ್ ಮೇಡನ್ ಮಾಡಲು ನಾವು ಮೊದಲೇ ಯೋಜನೆ ಹಾಕಿಕೊಂಡಿರಲಿಲ್ಲ. ಆದರೆ, ಅಂತಹ ಸಾಧನೆ ಮಾಡಲು ಸಾಧ್ಯವಾಗಿದ್ದು ನನಗೆ ಸಂತಸ ಉಂಟುಮಾಡಿದೆ. ನನ್ನ ಸಾಮರ್ಥ್ಯದ ಬಗ್ಗೆ ನಾನು ವಿಶ್ವಾಸ ಹೊಂದಿದ್ದು, ಕಠಿಣ ಪರಿಶ್ರಮಪಡಲು ಸಿದ್ಧವಾಗಿದ್ದೇನೆ' ಎಂದಿದ್ದಾರೆ ಶಮಿ ಅಹ್ಮದ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!