ಕ್ರೀಡೆ

17ರಿಂದ ಶಫಿ ದಾರಾಶಾ ಟ್ರೋಫಿ

ಬೆಂಗಳೂರು: ಅಖಿಲ ಭಾರತ ಆಹ್ವಾನಿತ ಶಫಿ ದಾರಾಶಾ ಕ್ರಿಕೆಟ್ ಪಂದ್ಯಾವಳಿ ಇದೇ ಜುಲೈ 17ರಿಂದ ಬರುವ ಆಗಸ್ಟ್ 13ರವರೆಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯಲಿದೆ.
ಪಂದ್ಯಾವಳಿ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ  ನಾಲ್ಕು ತಂಡಗಳನ್ನು ಪ್ರಕಟಿಸಿದೆ. ಕೆಎಸ್‌ಸಿಎ ಕಾಲ್ಟ್ಸ್, ಕೆಎಸ್‌ಸಿಎ ಪ್ರಸಿಡೆಂಟ್ ಇಲೆವೆನ್, ಕೆಎಸ್‌ಸಿಎ ಸೆಕ್ರೇಟಿಸ್ ಇಲೆವೆನ್ ಹಾಗೂ ಕೆಎಸ್‌ಸಿಎ ಇಲೆವೆನ್ ಆ ನಾಲ್ಕು ತಂಡಗಳವಾಗಿವೆ.
ರಾಜ್ಯ ರಣಜಿ ಪ್ರಮುಖ ಆಟಗಾರರಾದ ಸಿ.ಎಂ ಗೌತಮ್, ಸ್ಟುವಟ್ ಬಿನ್ನಿ, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಕೆ.ಪಿ ಅಪ್ಪಣ್ಣ, ಅಭಿಮನ್ಯು ಮಿಥುನ್, ಶರತ್ ಎಚ್.ಎಸ್ ಸೇರಿದಂತೆ ಪಂದ್ಯಾವಳಿಯಲ್ಲಿ ಕರ್ನಾಟಕದ ಒಟ್ಟು 58 ಪ್ರಮುಖ ಆಟಗಾರರು ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕದ ನಾಲ್ಕು ತಂಡಗಳು ಸೇರಿದಂತೆ ಇತರ ರಾಜ್ಯಗಳ 12 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಹೀಗಾಗಿ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳ ನಡುವೆ ಹೋರಾಟ ನಡೆಯಲಿದೆ.
ಇದರೊಂದಿಗೆ ಎಲ್ಲ ನಾಲ್ಕೂ ತಂಡಗಳಿಗೂ ಪ್ರತ್ಯೇಕ ತರಬೇತುದಾರರು ಮತ್ತು ದೈಹಿಕ ತಜ್ಞರನ್ನು ಹೊಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!