ಕ್ರೀಡೆ

ಭಾರತ ಕಿರಿಯರ ಬೃಹತ್ ಮೊತ್ತ

ದಂಬೂಲಾ: ಮೊದಲನೇ ದಿನ ತೋರಿದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು 2ನೇ ದಿನವೂ ಮುಂದುವರಿಸಿದ 19ವರ್ಷದೊಳಗಿನ ಭಾರತ ತಂಡ, ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ತಂಡದ ವಿರುದ್ಧದ ಮೊದಲ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 503 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಅಲ್ಲದೆ ತಮ್ಮ ಮೊದಲ ಇನಿಂಗ್ಸ್ ಆರಂಭಿಸಿದ 19ವರ್ಷದೊಳಗಿನ ಶ್ರೀಲಂಕಾ ದಿನಾಂತ್ಯಕ್ಕೆ 24 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡು ಆರಂಭಿಕ ಕುಸಿತ ಕಂಡಿದೆ.
ಪಂದ್ಯದ ಮೊದಲ ದಿನ ನಾಯಕ ವಿಜಯ್ ಜೋಲ್ ಅಜೇಯ 129 ಹಾಗೂ ಸಂಜು ಸ್ಯಾಮ್ಸನ್ ಅಜೇಯ 74 ರನ್‌ಗಳ ನೆರವಿನಿಂದ 2 ವಿಕೆಟ್ ನಷ್ಟಕ್ಕೆ 333 ರನ್ ಕಲೆಹಾಕಿತ್ತು. ಎರಡನೇ ದಿನ ತಮ್ಮ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡ ಉತ್ತಮ ಪ್ರದರ್ಶನ ನೀಡಿ ಬೃಹತ್ ಮೊತ್ತ ಕಲೆ ಹಾಕಿದೆ.
ಎರಡನೇ ದಿನ ಸಂಜು ಸ್ಯಾಮ್ಸನ್ ಕೇವಲ 15ರನ್‌ಗಳನಷ್ಟೇ ಗಳಿಸಿದರು. ಸ್ಯಾಮ್ಸನ್ 89 ರನ್‌ಗಳಿಸಿದ್ದಾಗ ಕರುಣಾರತ್ನೆ ಎಸೆತದಲ್ಲಿ ವಿಕೆಟ್ ಕೀಪರ್ ಕುಸಾಲ ಮೆಂಡಿಸ್‌ಗೆ ಕ್ಯಾಚ್ ನೀಡಿದರು. ನಂತರ ಬಂದ ಶ್ರೇಯಸ್ ಐಯರ್, ವಿಜಯ್ ಜತೆಗೂಡಿ ಉತ್ತಮ ಜತೆಯಾಟ ನೀಡಿದರು. ಈ ಇಬ್ಬರು 4ನೇ ವಿಕೆಟ್‌ಗೆ 62 ರನ್‌ಗಳ ಜತೆಯಾಟ ನೀಡಿದರು.
ಈ ವೇಳೆ 173 ರನ್‌ಗಳಿಸಿದ್ದ ಜೋಲ್, ಕರುಣಾರತ್ನೆ ಎಸೆತದಲ್ಲಿ ವಿಕೆಟ್ ಕೀಪರ್ ಕುಸಾಲ ಮೆಂಡಿಸ್‌ಗೆ ಕ್ಯಾಚ್ ನೀಡಿವ ಮೂಲಕ ತಮ್ಮ ಉತ್ತಮ ಇನಿಂಗ್ಸ್ ಅಂತ್ಯಗೊಳಿಸಿದರು. ಇವರ ಹಿಂದೆ 65 ರನ್‌ಗಳಿಸಿದ್ದ ಶ್ರೇಯಸ್, ವಿಮರ್ಶನ ಎಸೆತದಲ್ಲಿ ಹಶನ್ ಡುಮಿಂದುಗೆ ಕ್ಯಾಚ್ ನೀಡಿದರು. ನಂತರ ಮಹಮದ್ ಸೈಫ್ 17 ಹಾಗೂ ಅಮಿರ್ ಗನಿ 2 ರನ್‌ಗಳಿಸಿ ಪೆವಿಲಿಯನ್ ಸೇರಿಕೊಂಡರು.
ತಂಡದ ಮೊತ್ತ 500ರ ಗಡಿ ದಾಟಿದಾಗ ಭಾರತ ತಮ್ಮ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳಲು ನಿರ್ಧರಿಸಿತು. ಆಗ ಅಂಕುಶ್ ಬೈನ್ 13 ಹಾಗೂ ಕುಲ್ದೀಪ್ 2 ರನ್‌ಗಳಿಸಿ ಅಜೇಯರಾಗುಳಿದರು. ಶ್ರೀಲಂಕಾ ಪರ ಕರುಣಾರತ್ನೆ 94 ರನ್‌ಗಳಿಗೆ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ನಂತರ ತಮ್ಮ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡ 2ನೇ ದಿನಾಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 24 ರನ್ ಗಳಿಸಿತ್ತು. ಲಂಕಾ ಪರ ಆರಂಭಿಕರಾಗಿ ಕಣಕ್ಕಿಳಿದ ಕಸಾಲ ಮೆಂಡಿಸ್ ಹಾಗೂ ಹಶನ್ ಡುಮಿಂದು ತಂಡಕ್ಕೆ ಕೇವಲ 15ರನ್‌ಗಳ ಜತೆಯಾಟ ನೀಡಿದರು.
ಈ ವೇಳೆ 6 ರನ್ ಗಳಿಸಿದ್ದ ಮೆಂಡಿಸ್, ಅತುಲ್ ಸಿಂಗ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬೀಳುವ ಮೂಲಕ ಪೆವಿಲಿಯನ್ ಸೇರಿಕೊಂಡರು. ನಂತರ ಡುಮಿಂದು ಅಜೇಯ 10 ಹಾಗೂ ಕವಿಂದು ಕುಲಸೇಖರ ಅಜೇಯ 5 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನಿಂಗ್ಸ್ 503/7 (ಡಿ)

ಜೋಲ್ 173
ಸ್ಯಾಮ್ಸನ್ 89
ಬೌಲಿಂಗ್: ಕರುಣಾರತ್ನೆ 94/4, ಫರ್ನಾಂಡೊ 88/1

ಶ್ರೀಲಂಕಾ ಮೊದಲ ಇನಿಂಗ್ಸ್ 24/1 (2ನೇ ದಿನಾಂತ್ಯಕ್ಕೆ)
ಡುಮಿಂದು ಅಜೇಯ 10
ಮೆಂಡಿಸ್ 6
ಬೌಲಿಂಗ್: ಅತುಲ್ ಸಿಂಗ್ 10/1

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!