ಕ್ರಿಸ್‌ಮಸ್ತ್ ಮಜಾ
ಒಂದು ಬೀಚ್ ರೆಸಾರ್ಟ್‌ನಲ್ಲಿ ಸೆಕ್ಸೀ ಹುಡುಗಿಯೊಂದಿಗೆ ಕಳೆಯುವ ಭಾಗ್ಯ ಸಿಕ್ಕರೆ ಹೇಗಿರುತ್ತೆ ಊಹಿಸಿ... ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮಿಡ್‌ಫೀಲ್ಡರ್ ಕ್ರಿಸ್ ಸ್ಮಾಲಿಂಗ್ ಕೂಡಾ ಹೆಚ್ಚು ಕಡಿಮೆ ಹಾಗೆಯೇ ತಮ್ಮ ವಿಶ್ರಾಂತಿ ದಿನಗಳನ್ನು ಕಳೆಯುತ್ತಿದ್ದಾರೆ. ಅದಕ್ಕಾಗಿ, ಅವರು ತವರಾದ ಕೆರಿಬಿಯನ್ ದ್ವೀಪದ ಬಾರ್ಬಡೋಸನ್ ಬೀಚ್ ರೆಸಾರ್ಟ್ ಅನ್ನು ಆರಿಸಿಕೊಂಡಿದ್ದಾರೆ. ಗೆಳತಿಯೊಂದಿಗೆ ಅವರದ್ದೀಗ ಫುಲ್ ಮಜಾ. ಅಂದಹಾಗೆ, ಕ್ರಿಸ್ ಹಾಗೆ ಸುಮ್ಮನೆ ಟೈಂ ಪಾಸ್‌ಗಾಗಿ ಅಲ್ಲಿಗೆ ಹೋಗಿಲ್ಲ. ಬಲಪಾದಕ್ಕೆ ಏಟು ಬಿದ್ದಿರುವುದರಿಂದ ಅವರಿಗೆ ಶಸ್ತ್ರಚಿಕಿತ್ಸೆಯಾಗಿದೆ. ಹಾಗಾಗಿ, ಅವರು ರೆಸಾರ್ಟ್‌ಗೆ ರೆಸ್ಟ್ ಮಾಡಲು ತೆರಳಿದ್ದಾರೆ. ಜೊತೆಯಲ್ಲಿ ಗರ್ಲ್‌ಫ್ರೆಂಡ್ ಸ್ಯಾಮ್ ಕೂಕೆ ಇರುವುದರಿಂದ ರೆಸ್ಟ್ ಸಖತ್ತಾಗೇ ಆಗುತ್ತಿದೆ. ಇತ್ತೀಚೆಗೆ, ರೆಸಾರ್ಟ್ ಸುತ್ತಲಿನ ಬೀಚ್‌ನಲ್ಲಿ ಕ್ರಿಸ್ ಹಾಗೂ ಅವರ ಬಿಕಿನಿ ಸ್ನೇಹಿತೆ ಕ್ಯಾಮೆರಾಕ್ಕೆ ಕಂಡಿದ್ದು ಹೀಗೆ...