ಹಂಟ್ ಎಂಬ ಹಾಟ್
ಆತನ ಹೆಸರು ಜೇಮ್ಸ್ ಹಂಟ್. ಅವನೊಬ್ಬ ರೇಸಿಂಗ್ ಡ್ರೈವರ್. 20 ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾನೆ. ಈ ಕಾರಣಕ್ಕಾಗಿಯೇ, ವೆಬ್ಸೈಟ್ ಒಂದು ಆತನಿಗೆ ನುಡಿನಮನ ಸಲ್ಲಿಸಿರುವುದಲ್ಲದೇ, ಕೆಲ ಖಾಸಗಿ ವಿಷಯಗಳನ್ನೂ ಬಿಚ್ಚಿಟ್ಟಿದೆ. ಸುಂದರನಾಗಿದ್ದ ಆತ, ಕಣ್ಣ ಸನ್ನೆಯಲ್ಲೇ ಅದೆಷ್ಟೋ ಹುಡುಗಿಯರನ್ನು ಸೆಳೆಯುತ್ತಿದ್ದನಂತೆ. ಪಂದ್ಯಾವಳಿಗಳಿಗಾಗಿ ದೇಶ ವಿದೇಶ ಸುತ್ತುವಾಗ, ವಿಮಾನದಲ್ಲಿ ಓಡಾಡುವಾಗಲೇ ಗಗನಸಖಿಯರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದನಂತೆ. ಒಂದೊಮ್ಮೆ ಆತ ಜಪಾನ್ನ ಮೋಟಾರ್ ರೇಸ್ನಲ್ಲಿ ಭಾಗವಹಿಸಿದ್ದಾಗ, ಆತ ತಂಗಿದ್ದ ಹೋಟೆಲ್ ರೂಮಿನ ಮುಂದೆ ನಲ್ವತ್ತು ಹುಡುಗಿಯರು ಕ್ಯೂ ನಿಂತಿದ್ದರಂತೆ. ಆತನ ದರುಶನ ಪಡೆಯಲಷ್ಟೇ! ಬೇರೆ ಏನೂ ಯೋಚಿಸಬೇಡಿ!