ಹೀತರ್ ಏಕಾಂತ
ಟೆನಿಸ್ ಆಟಗಾರ್ತಿ ಹೀತರ್ ಏಕಾಂತಕ್ಕೆ ಶರಣಾಗಿದ್ದಾಳೆ. ಕಾರಣ, ಜೂ. 12ರಂದು ನಡೆದಿದ್ದ ಎಗಾನ್ ಕ್ಲಾಸಿಕ್ ಪಂದ್ಯಾವಳಿಯ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಆಕೆ ಸೋಲು ಕಂಡಿದ್ದು. ಕೆಲ ತಿಂಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಹೀತರ್, ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದಳು. ಆದರೆ, ಟೂರ್ನಿಯಲ್ಲಿ ಜಯ ಗಳಿಸಲಿಲ್ಲ. ಹಾಗಂತ, ಆಕೆ ತೀರಾ ಹತಾಶಳಾಗಿಲ್ಲವಂತೆ. ರಿಲ್ಯಾಕ್ಸ್ ಮಾಡಿಕೊಳ್ಳಲು ತನ್ನದೇ ದಾರಿ ಹುಡುಕಿಕೊಂಡಿದ್ದಾಳೆ. ತನಗಿಷ್ಟದ ಬಟ್ಟೆಬರೆ ಖರೀದಿಸಿದ್ದಾಳೆ. ಇಷ್ಟದ ಮಾಂಸದಡುಗೆ ಮಾಡಿಕೊಂಡು ತಿನ್ನುತ್ತಾ, ಇಷ್ಟದ ಬಟ್ಟೆ ಹಾಕಿಕೊಂಡು, ಪುಸ್ತಕ ಓದುತ್ತಾ ಕಾಲ ಕಳೆಯುತ್ತಿದ್ದಾಳೆ. ಮನಸ್ಸು ಸರಿ ಹೋದ ಮೇಲೆ, ಮತ್ತೆ ಟೆನಿಸ್ ಅಂಗಳಕ್ಕೆ ಜಿಗಿಯೋ ಲೆಕ್ಕಾಚಾರ ಆಕೆಯದ್ದು.