ಏಷ್ಯನ್ ಆರ್ಚರಿ: ದೀಪಿಕಾ ಅಲಭ್ಯ
ಜಮ್ಷಡ್ಪುರ: ಇಂಟರ್ಮೀಡಿಯಟ್ ಪರೀಕ್ಷೆಯ ಹಿನ್ನೆಲೆಯಲ್ಲಿ ದೇಶದ ಅಗ್ರ ರ್ಯಾಂಕಿಂಗ್ ಮಹಿಳಾ ಆರ್ಚರ್ ದೀಪಿಕಾ ಕುಮಾರಿ ಮುಂಬರುವ ಏಷ್ಯನ್ ಗ್ರಾನ್ ಪ್ರಿಕ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿಲ್ಲ. ಇದು ಭಾರತದ ಪದಕ ಪಟ್ಟಿಗೆ ಪೆಟ್ಟು ನೀಡುವ ಸಾಧ್ಯತೆಗಳಿವೆ. 'ಮಾರ್ಚ್ 9ರಿಂದ ಬ್ಯಾಂಕಾಕ್ನಲ್ಲಿ ನಡೆಯಲಿರುವ ಏಷ್ಯನ್ ಗ್ರಾನ್ ಪ್ರಿಕ್ಸ್ ಪಂದ್ಯಾವಳಿಯಲ್ಲಿ ದೀಪಿಕಾ ಕುಮಾರಿ ಭಾಗವಹಿಸುತ್ತಿಲ್ಲ. ದೀಪಿಕಾ ತಮ್ಮ ಇಂಟರ್ಮಿಡಿಯಟ್ ಫೈನಲ್ ಪರೀಕ್ಷೆ ಬರಿಯಬೇಕಾಗಿರುವ ಹಿನ್ನೆಲೆಯಲ್ಲಿ ಈ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ' ಎಂದು ಟಾಟಾ ಆರ್ಚರಿ ಆಕಾಡೆಮಿಯಲ್ಲಿನ ದೀಪಿಕಾಗೆ ತರಬೇತಿ ನೀಡುತ್ತಿರುವ ಪುರ್ಣಿಮಾ ಮಹ್ತೋ ಅವರು ತಿಳಿಸಿದರು. ಈಗಾಗಲೇ ಎರಡು ಬಾರಿ ಪರೀಕ್ಷೆಯಿಂದ ತಪ್ಪಿಸಿಕೊಂಡಿರುವ ದೀಪಿಕಾ ಈ ಬಾರಿ ತಪ್ಪಿಸಿಕೊಳ್ಳಲೇಬಾರದು ಎಂಬ ತೀರ್ಮಾನ ಮಾಡಿದ್ದರು ಎಂದು ಏಷ್ಯನ್ ಆರ್ಚರಿಯಲ್ಲಿ ಚಿನ್ನ ಗೆದ್ದಿರುವ ಪೂರ್ಣಿಮಾ ಹೇಳಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.