ಮೆಕ್ಸಿಕನ್ ಓಪನ್: ರಫೆಲ್ ನಡಾಲ್ ಮುಡಿಗೆ ಪ್ರಶಸ್ತಿ
ಮೆಕ್ಸಿಕೊ: ಹಾಲಿ ಚಾಂಪಿಯನ್ ಡೇವಿಡ್ ಫೆರರ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ರಫೆಲ್ ನಡಾಲ್, ಇಲ್ಲಿ ನಡೆದ ಮೆಕ್ಸಿಕನ್ ಓಪನ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಜಯಗಳಿಸುವ ಮೂಲಕ ಪ್ರಶಸ್ತಿಯನ್ನು ತಮ್ಮ ಮಡಿಲಿಗೆ ಹಾಕಿಕೊಂಡರು. ಈ ಪಂದ್ಯದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ನಡಾಲ್, ಫೆರರ್ ಅವರನ್ನು 6-0, 6-2 ಅಂತರದಲ್ಲಿ ಮಣಿಸಿ 2ನೇ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪಂದ್ಯದಲ್ಲಿ ಕೈಚೆಲ್ಲಿದ ಫೆರರ್, ಈ ಬಾರಿಯೂ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಸತತ ನಾಲ್ಕು ಬಾರಿ ಪ್ರಶಸ್ತಿಯನ್ನು ಗೆದ್ದು, ಥಾಮಸ್ ಮಸ್ಟರ್ ಜತೆ ದಾಖಲೆ ಹಂಚಿಕೊಳ್ಳುವ ಕನಸು ಭಗ್ನಗೊಂಡಿದೆ.
ಕಳೆದ ತಿಂಗಳು ಗಾಯದ ಸಮಸ್ಯೆಯಿಂದ ವಾಪಸ್ಸಾದ ನಂತರ ಆಡಿದ 3 ಪಂದ್ಯಾವಳಿಗಳಲ್ಲಿ ಎರಡರಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ ವಿಶ್ವದ 8ನೇ ರ್ಯಾಂಕಿಂಗ್ ಆಟಗಾರ್ತಿ ಸಾರಾ ಎರ್ರಾನಿ ಈ ಬಾರಿಯೂ ಪ್ರಶಸ್ತಿಯನ್ನು ತಮ್ಮಲೇ ಉಳಿಸಿಕೊಂಡಿದ್ದಾರೆ. ಸಾರಾ ತಮ್ಮ ಎದುರಾಳಿ 2ನೇ ಶ್ರೇಯಾಂಕಿತೆ ಕಾರ್ಲಾ ಸೌರೆಜ್ ನವಾರೊ ಅವರನ್ನು 6-0, 6-4 ಸೆಟ್ಗಳ ಅಂತರದಲ್ಲಿ ಮಣಿಸಿ ಗೆಲುವಿನ ನಗೆ ಬೀರಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.