ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸರ್ವೀಸಸ್‌ಗೆ ಪುನಃ ಸಂತೋಷ

Parashurama
Updated On : 4 Mar 2013, 1:03 am

ಕೊಚಿ: ಹಾಲಿ ಚಾಂಪಿಯನ್ ಸರ್ವೀಸಸ್ ಹಾಗೂ ಕೇರಳ ತಂಡಗಳ ನಡುವೆ ಭಾನುವಾರ ನಡೆದ ಸಂತೋಷ್ ಟ್ರೋಫಿ ಫೈನಲ್ ಹಣಾಹಣಿಯಲ್ಲಿ, ಸರ್ವೀಸಸ್ ತಂಡ ಪಂದ್ಯದಲ್ಲಿ 4-3 ಅಂತರದಲ್ಲಿ ಜಯಗಳಿಸಿ, ಕಪ್ ಅನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಇಲ್ಲಿನ ಜವಾಹರಲಾಲ್ ನೆಹರೂ ಫುಟ್ಬಾಲ್ ಕ್ರೀಡಾಂಗಣದಲ್ಲಿ, ನಡೆದ ಪಂದ್ಯ ತೀವ್ರ ಹಣಾಹಣಿಯಿಂದ ಕೂಡಿತ್ತು. ಈ ಪಂದ್ಯದಲ್ಲಿ ಎರಡೂ ತಂಡಗಳು ಯಾವುದೇ ಗೋಲು ಗಳಿಸದೇ ಪಂದ್ಯ ಡ್ರಾ ಆಯಿತು. ಹೀಗಾಗಿ, ಹೆಚ್ಚುವರಿ ಸಮಯವನ್ನು ನೀಡಲಾಯಿತು.
ಆಗಲೂ, ಇತ್ತಂಡಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಅಂತಿಮವಾಗಿ, ಪೆನಾಲ್ಟಿ ಶೂಟೌಟ್ ಅವಕಾಶವನ್ನು ಎರಡೂ ತಂಡಗಳಿಗೆ ನೀಡಲಾಯಿತು. ಈ ಹಂತದಲ್ಲಿ 4 ಗೋಲು ಗಳಿಸುವಲ್ಲಿ ಯಶಸ್ವಿಯಾದ ಸರ್ವೀಸಸ್, ಕೇರಳ ತಂಡವನ್ನು (3 ಗೋಲು) ಸೋಲಿಸಿತು.
ಆದರೆ, ಪಂದ್ಯದ ಹೆಚ್ಚುವರಿ ಆಟದ ಸಮಯದಲ್ಲಿ ಸರ್ವೀಸಸ್ 4 ಗೋಲು ಗಳಿಸಿದರೆ, ಕೇರಳ ತಂಡ 3 ಗೋಲು ಗಳಿಸಿತು.
ಸರ್ವೀಸಸ್ ಪರವಾಗಿ ಧನ್ಜೀ ಸಿಂಗ್, ಶರ್ವಾಣ್ ಕುಮಾರ್, ಎಂ. ದಿಲೀಪ್ ಹಾಗೂ ಕಿರಣ್ ಕೆ. ವರ್ಗೀಸ್ ಗೋಲು ಗಳಿಸಿದರೆ, ಕೇರಳದ ಪರ ರಿನೋ ಆ್ಯಂಟೋ, ಅಬ್ದುಲ್ ಬಶೀದ್ ಹಾಗೂ ಬಿಟಿ ಶರತ್ ಅವರು ಗೋಲು ಗಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments