ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸಿಮನ್ಸ್ ಸರ್ಕಸ್ ವಿಂಡೀಸ್‌ಗೆ ಜಯ

Parashurama
Updated On : 3 Mar 2013, 10:26 am

ನಾರ್ಥ್ ಸೌಂಡ್: ಲೆಂಡ್ಲ್ ಸಿಮನ್ಸ್ (ಅಜೇಯ 63) ಅರ್ಧ ಶತಕದ ನೆರವಿನೊಂದಿಗೆ ವೆಸ್ಟ್ ಇಂಡೀಸ್ ತಂಡ ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ 8 ವಿಕೆಟ್ ಅಂತರದಿಂದ ವಿಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆ ತಂಡವನ್ನು ಕೇವಲ 130 ರನ್‌ಗಳಿಗೆ ನಿಯಂತ್ರಿಸಿದ ವೆಸ್ಟ್ ಇಂಡೀಸ್, ನಂತರ ಕೇವಲ 16.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ ಜಯದ ಕೇಕೆ ಹಾಕಿತು.
ಸಿಮನ್ಸ್ ಮತ್ತು ಡ್ವೇನ್ ಬ್ರಾವೋ (ಅಜೇಯ 38) ಜೋಡಿ 3ನೇ ವಿಕೆಟ್ ಜತೆಯಾಟದಲ್ಲಿ 85 ರನ್ ಗಳಿಸಿದ್ದು, ವಿಂಡೀಸ್ ಸುಲಭ ಜಯ ಸಾಧಿಸಲು ಕಾರಣವಾಯಿತು. ಬ್ರಾವೋ ಅವರನ್ನು ರನೌಟ್ ಮಾಡುವ ಅವಕಾಶದಿಂದ ಜಿಂಬಾಬ್ವೆ ಆಟಗಾರರು ವಂಚಿತವಾಗಿದ್ದು, ವಿಂಡೀಸ್ ಸುಲಭ ವಿಜಯಕ್ಕೆ ಮೊತ್ತೊಂದು ಕಾರಣವಾಯಿತು.
ಆರಂಭಿಕ ಆಟಗಾರ ಜಾನ್ಸನ್ ಜಾರ್ಲ್ಸ್ ಅವರು ಕೇಲ್ ಜರ್ವೀಸ್ ಬೌಲಿಂಗ್‌ನಲ್ಲಿ ಸತತವಾಗಿ 5 ಬೌಂಡರಿ ಬಾರಿಸಿದ ನಂತರ ಅವರನ್ನು ಬೌಲ್ಡ್ ಮಾಡುವಲ್ಲಿ ಜಿಂಬಾಬ್ವೆಯ ಕ್ರಿಸ್ ಎಂಫೋಫು ಯಶಸ್ವಿಯಾದರು. ನಂತರ ಡಾರೆನ್ ಬ್ರಾವೋ ಅವರನ್ನು ಶೂನ್ಯಕ್ಕೆ ಪೆವಿಲಿಯನ್‌ಗೆ ಕಳುಹಿಸುವಲ್ಲಿ ಎಂಫೋಫು ಯಶಸ್ವಿಯಾದರು.
ಆದರೆ, ಕ್ರೀಸ್‌ಗೆ ಕಚ್ಚಿ ನಿಂತುಕೊಂಡ ಸಿಮನ್ಸ್ ಮತ್ತು ಡ್ವೈನ್ ಬ್ರಾವೋ ವಿಕೆಟ್ ಉರುಳಿಸಲು ಎಂಫೋಫು ಮಾಡಿದ ಪ್ರಯತ್ನಗಳು ಸಂಪೂರ್ಣವಾಗಿ ವಿಫಲವಾದವು. ಡ್ವೈನ್ ಬ್ರಾವೋ ಅವರನ್ನು ರನೌಟ್ ಮಾಡುವ ಅವಕಾಶವನ್ನು ಜಿಂಬಾಬ್ವೆ ಹೊಂದಿತ್ತು. ಆದರೆ, ಜಿಂಬಾಬ್ವೆ ನಾಯಕ ಬ್ರೆಂಡಾನ್ ಟೇಲರ್ ಈ ಪ್ರಯತ್ನದಲ್ಲಿ ಸಂಪೂರ್ಣವಾಗಿ ವಿಫಲವಾದರು.
ಇದಕ್ಕೂ ಮುನ್ನ, ಜಿಂಬಾಬ್ವೆ ಪರ ಉತ್ತಮ ಬೌಲಿಂಗ್ ಮಾಡಿದ ಮಾಲ್ಕಮ್ ವಾಲರ್(49) ಒಂದು ರನ್ ಕೊರತೆಯಿಂದ ಟಿ20ಯ ಮೊದಲ ಅರ್ಧ ಶತಕ ಪೂರೈಸುವುದರಿಂದ ವಂಚಿತರಾದರು. ವಾಲರ್‌ಮತ್ತು ಕ್ರೈಗ್ ಎರ್ವಿನ್ (34) ಅವರು 4ನೇ ವಿಕೆಟ್‌ಗೆ 60 ರನ್ ಪೇರಿಸುವ ಮೂಲಕ ಸೊಗಸಾದ ಜತೆಯಾಟ ಪ್ರದರ್ಶಿಸಿದರು. ಆದರೆ, ಆರಂಭಿಕ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್ ಕೈಕೊಟ್ಟಿದ್ದು, ಜಿಂಬಾಬ್ವೆ ಸೋಲಿಗೆ ಪ್ರಮುಖ ಕಾರಣವಾಯಿತು. ವಿಂಡೀಸ್ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಟಿನೋ ಬೆಸ್ಟ್ ಅವರು ಮೂರು ವಿಕೆಟ್ ಪಡೆಯುವ ಮೂಲಕ ಜಿಂಬಾಬ್ವೆ ಅಲ್ಪ ಮೊತ್ತಕ್ಕೆ ಕುಸಿಯಲು ಕಾರಣರಾದರು. ಅರ್ಧ ಶತಕ ಪೂರೈಸುವ ಮೂಲಕ ವಿಂಡೀಸ್ ವಿಜಯದಲ್ಲಿ ಪ್ರಮುಖ ಪಾತ್ರವಹಿಸಿದ ಸಿಮನ್ಸ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments