ಆಸೀಸ್ಗೆ ಬೃಹತ್ ಸವಾಲು
ಚೇತೇಶ್ವರ ಪೂಜಾರ ಅವರ ದ್ವಿಶತಕದ ನೆರವಿನಿಂದಾಗಿ, ಆತಿಥೇಯ ಭಾರತ ತಂಡ, ಆಸೀಸ್ ವಿರುದ್ಧದ ಎರಡನೇ ಟೆಸ್ಟ್ನ ತನ್ನ ಮೊದಲ...
ಭಾರತ ಪ್ರಥಮ ಇನಿಂಗ್ಸ್ 503ಕ್ಕೆ ಅಂತ್ಯ; ವಿಜಯ್-ಪೂಜಾರ ದಾಖಲೆ ಜೊತೆಯಾಟ
ಹೈದರಾಬಾದ್: ಚೇತೇಶ್ವರ ಪೂಜಾರ ಅವರ ದ್ವಿಶತಕದ ನೆರವಿನಿಂದಾಗಿ, ಆತಿಥೇಯ ಭಾರತ ತಂಡ, ಆಸೀಸ್ ವಿರುದ್ಧದ ಎರಡನೇ ಟೆಸ್ಟ್ನ ತನ್ನ ಮೊದಲ ಇನಿಂಗ್ಸ್ನಲ್ಲಿ 503 ರನ್ಗಳ ದೊಡ್ಡ ಮೊತ್ತವನ್ನು ಪೇರಿಸಿತು.
266 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಸರದಿ ಆರಂಭಿಸಿದ ಆಸ್ಟ್ರೇಲಿಯಾ ಸೋಮವಾರ ದಿನಾಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿತ್ತು. 8 ವಿಕೆಟ್ಗಳನ್ನು ಹೊಂದಿರುವ ಕಾಂಗರೂ ಪಡೆ, ಇನ್ನೂ 192 ರನ್ಗಳ ಹಿನ್ನಡೆಯಲ್ಲಿದೆ.
ಭಾನುವಾರ ದಿನದಾಟದಲ್ಲಿ ಮಿಂಚಿದ್ದ ಮುರಳಿ ವಿಜಯ್ ಹಾಗೂ ಚೇತೇಶ್ವರ ಪೂಜಾರ ಜೋಡಿ, ಸೋಮವಾರವೂ ತಮ್ಮ ಜೊತೆಯಾಟಕ್ಕೆ ಹೊಸ ಮೆರುಗು ತಂದಿತು. ಮೂರನೇ ವಿಕೆಟ್ಗೆ 370 ರನ್ಗಳ ದೊಡ್ಡ ಮೊತ್ತ ಪೇರಿಸಿದ ಇವರಿಬ್ಬರೂ, ಭಾರತ ದೊಡ್ಡ ಮೊತ್ತ ಪೇರಿಸಲು ನೆರವಾದರು. ಇವರಿಬ್ಬರ ಜೊತೆಯಾಟದಿಂದ ಭಾರತ 500 ರನ್ ಗಡಿ ದಾಟಿದ ಮೇಲೆ, 116 ರನ್ ಪೇರಿಸುವಷ್ಟರಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡಿತು.
ಭಾರತದ ಪ್ರಥಮ ಇನಿಂಗ್ಸ್ ಮುಗಿದ ಮೇಲೆ, ಆಸೀಸ್ನ ದ್ವಿತೀಯ ಇನಿಂಗ್ಸ್ ಶುರುವಾದ ನಂತರ, ಮತ್ತೆ ತಮ್ಮ ಕೈಚಳಕ ತೋರಿದ ರವಿಚಂದ್ರನ್ ಅಶ್ವಿನ್, ಆರಂಭಿಕ ಡೇವಿಡ್ ವಾರ್ನರ್ (26), ಫಿಲಿಪ್ ಹ್ಯೂಸ್ (0) ಅವರ ವಿಕೆಟ್ ಪಡೆದರು. ದಿನಾಂತ್ಯಕ್ಕೆ ಕಾಂಗರೂ ಪಡೆ 74 ರನ್ ಪೇರಿಸುವಷ್ಟರಲ್ಲಿ 2 ವಿಕೆಟ್ಗಳನ್ನು ಕಳೆದುಕೊಂಡಿತ್ತು.
ಪಂದ್ಯ ಮುಗಿಯಲು ಇನ್ನೂ ಎರಡು ದಿನಗಳು ಬಾಕಿಯಿದ್ದು, ಭಾರತ ತಂಡ ಹೇಗೆ ಪಂದ್ಯದಲ್ಲಿ ಜಯ ಕಾಣಲಿದೆ ಎಂಬುದು ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಸಾರ್ಥಕ ಜೊತೆಯಾಟ: ಭಾನುವಾರದ ದಿನದಾಟದಲ್ಲಿ ಮಿಂಚಿದ್ದ ಮುರಳಿ ವಿಜಯ್ ಹಾಗೂ ಚೇತೇಶ್ವರ ಪೂಜಾರ ಇಬ್ಬರೂ, ಸೋಮವಾರದ ದಿನವನ್ನೂ ತಮ್ಮ ಹೆಸರಿಗೇ ಬರೆದುಕೊಂಡರು.
ವಿಜಯ್, ತಮ್ಮ ಇನಿಂಗ್ಸ್ನಲ್ಲಿ 23 ಬೌಂಡರಿಹಾಗೂ 2 ಸಿಕ್ಸರ್ಗಳನ್ನು ಬಾರಿಸಿದರೆ, ಅತ್ತ, ಟೀಂ ಇಂಡಿಯಾದ ಹೊಸ 'ರನ್ ಮೆಷೀನ್' ಎನಿಸಿರುವ ಚೇತೇಶ್ವರ ಪೂಜಾರ, ತಾವು ಎದುರಿಸಿದ 341 ಎಸೆತಗಳಲ್ಲಿ 30 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು.
ಇನಿಂಗ್ಸ್ನ 119ನೇ ಓವರ್ನ ಮೊದಲ ಎಸೆತದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಎಸೆತದಲ್ಲಿ ಮಿಡ್ ವಿಕೆಟ್ ಬೌಂಡರಿ ಬಾರಿಸುವ ಮೂಲಕ ಪೂಜಾರ, ತಮ್ಮ ಎರಡನೇ ದ್ವಿಶತಕ ಪೂರೈಸಿದರು.
ಭಾನುವಾರದ ದಿನದಾಟಕ್ಕೆ ಹೋಲಿಸಿದರೆ, ಕ್ರೀಸ್ನಲ್ಲಿ ಕೊಂಚ ಬಳಲಿದಂತೆ ಕಂಡುಬಂದ ವಿಜಯ್ ಹಾಗೂ ಪೂಜಾರ, ಎಲ್ಲೂ ಕೈಚೆಲ್ಲದೇ ಆಡಿ, 2ನೇ ವಿಕೆಟ್ಗೆ 370 ರನ್ಗಳ ದಾಖಲೆಯ ಜೊತೆಯಾಟವನ್ನು ಆಡಿದರು.
ಈ ಮೂಲಕ 34 ವರ್ಷ ಹಳೆಯದಾದ ದಾಖಲೆಯೊಂದನ್ನು ಮುರಿದ ಹೆಗ್ಗಳಿಕೆಗೆ ಈ ಜೋಡಿ ಪಾತ್ರವಾಯಿತು. 1978ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೋಲ್ಕತಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ (182) ಹಾಗೂ ದಿಲೀಪ್ ವೆಂಗ್ಸರ್ಕಾರ್ (157) ದಿಲೀಪ್ ವೆಂಗ್ ಸರ್ಕಾರ್ (157) 2ನೇ ವಿಕೆಟ್ಗೆ 344 ರನ್ ಸೇರಿಸಿತ್ತು.
ಈ ದಾಖಲೆಯನ್ನು ಈಗ ವಿಜಯ್- ಪೂಜಾರ ಜೋಡಿ ಹಿಂದಿಕ್ಕಿದರೂ, ಭಾರತದ ಪರವಾಗಿ ಯಾವುದೇ ವಿಕೆಟ್ಗೆ ಅತಿ ದೊಡ್ಡ ಮೊತ್ತ ಪೇರಿಸಿರುವ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರ ದಾಖಲೆಯನ್ನು ಮೀರಲು ಸಾಧ್ಯವಾಗಲಿಲ್ಲ. ಈಡನ್ ಗಾರ್ಡನ್ನಲ್ಲಿ ರಾಹುಲ್- ಲಕ್ಷ್ಮಣ್ ಜೋಡಿ 376 ರನ್ಗಳ ಜೊತೆಯಾಟವನ್ನು ಆಡಿತ್ತು. ಕೇವಲ 7 ರನ್ಗಳ ಅಂತರದಲ್ಲಿ, ವಿಜಯ್- ಪೂಜಾರ ಜೋಡಿಗೆ ಈ ದಾಖಲೆ ಮೀರುವ ಅವಕಾಶ ಕೈತಪ್ಪಿತು.
ನಿಟ್ಟುಸಿರು ಬಿಟ್ಟ ಕಾಂಗರೂಗಳು: ಬಾನುವಾರ ಪೂರ್ತಿ ಬೆವರಿಳಿಸಿದರೂ, ವಿಜಯ್-ಪೂಜಾರ ಜೋಡಿಯನ್ನು ಬೇರ್ಪಡಿಸಲು ವಿಫಲರಾಗಿದ್ದ ಆಸೀಸ್ ಬೌಲರ್ಗಳು, ಯಶಸ್ಸು ಸಿಗಲು ಸೋಮವಾರ ದಿನದಾಟ ಆರಂಭವಾಗಿ 25 ಓವರ್ಗಳವರೆಗೆ ಕಾಯಬೇಕಾಯ್ತು.
ಇನಿಂಗ್ಸ್ನ 117ನೇ ಓವರ್ನಲ್ಲಿ ಮ್ಯಾಕ್ಸ್ವೆಲ್ ಎಸೆತಕ್ಕೆ ಕೋವನ್ಗೆ ಕ್ಯಾಚ್ ನೀಡಿದ ವಿಜಯ್ (167) ವಿಕೆಟ್ ಒಪ್ಪಿಸಿದರು.
ವಿಜಯ್ ಔಟಾದ ಮೇಲೆ ಕ್ರೀಸ್ಗೆ ಬಂದದ್ದು ಸಚಿನ್ ತೆಂಡೂಲ್ಕರ್.
ಸಾವಿರ್ ರನ್ ಸರದಾರ: ವಿಜಯ್ ಔಟಾದ ಮೇಲೂ ಪೂಜಾರ, ತಮ್ಮ ಎಂದಿನ ಶೈಲಿಯಲ್ಲೇ ಬ್ಯಾಟಿಂಗ್ ಮುಂದುವರೆಸಿದರು. ಅಷ್ಟರಲ್ಲಿ ಪಿಚ್ ನಿಧಾನಗತಿಯತ್ತ ತಿರುಗುತ್ತಿತ್ತು. ಆದರೂ, ಛಲ ಬಿಡದೇ ಆಡಿದ ಪೂಜಾರ 1000 ರನ್ ಗಡಿ ದಾಟಿದರು.
ಅಲ್ಲದೇ, ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ ಸಾವಿರ ರನ್ ಗಡಿ ದಾಟಿದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪೂಜಾರ ಪಾತ್ರರಾದರು. ವಿನೋದ್ ಕಾಂಬ್ಳಿ ಅವರು, 14 ಇನಿಂಗ್ಸ್ಗಳಿಂದ 1000 ರನ್ ಪೂರೈಸಿದ್ದರೆ, ಪೂಜಾರ ಅವರು 18 ಇನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಅಂತೂ ಇಂತೂ ಇವರ ವಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಪ್ಯಾಟಿನ್ಸನ್. 121ನೇ ಓವರ್ನಲ್ಲಿ ಪ್ಯಾಟಿನ್ಸನ್ ಅವರ ಎಸೆತದಲ್ಲಿ ಡೊಹಾರ್ಟಿ ಅವರಿಗೆ ಕ್ಯಾಚ್ ನೀಡಿದ ಪೂಜಾರ ವಿಕೆಟ್ ಒಪ್ಪಿಸಿದರು.
ಕುಸಿತ ಕಂಡ ಭಾರತ: ವಿಜಯ್- ಪೂಜಾರ ಜೋಡಿ ಮುರಿದ ನಂತರ, ಭಾರತದ ಪರವಾಗಿ ನಿಂತು ಕೊಂಚ ಬ್ಯಾಟ್ ಬೀಸಿದ್ದೆಂದರೆ, ಕೊಹ್ಲಿ ಹಾಗೂ ಧೋನಿ. 5ನೇ ವಿಕೆಟ್ಗೆ ಈ ಜೋಡಿ 56 ರನ್ ಪೇರಿಸಿತು.
ಈ ಇಬ್ಬರನ್ನೂ ಹೊರತುಪಡಿಸಿದರೆ, ಬೇರ್ಯಾರೂ ಉತ್ತಮವಾಗಿ ಆಡಲಿಲ್ಲ. ತೆಂಡೂಲ್ಕರ್ (7), ರವೀಂದ್ರ ಜಡೇಜಾ (10), ರವಿಚಂದ್ರನ್ ಅಶ್ವಿನ್ (1), ಹರ್ಭಜನ್ ಸಿಂಗ್ (0), ಭುವನೇಶ್ವರ ಕುಮಾರ್ (10) ಎಲ್ಲರೂ ಬೇಗನೇ ವಿಕೆಟ್ ಒಪ್ಪಿಸಿ ಹೊರನಡೆದರು. ಅಂತಿಮವಾಗಿ, ಭಾರತ 503 ರನ್ಗಳಿಗೆ ತನ್ನ ಪ್ರಥಮ ಇನಿಂಗ್ಸ್ ಮುಕ್ತಾಯಗೊಳಿಸಿತು.
ಸ್ಕೋರ್ ಬೋರ್ಡ್
ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ 237/9 ಡಿಕ್ಲೇರ್
ಭಾರತ ಪ್ರಥಮ ಇನಿಂಗ್ಸ್ 503/10
(ಭಾನುವಾರ ದಿನಾಂತ್ಯಕ್ಕೆ 311/1)
ವಿಜಯ್ ಸಿ ಕೊವನ್ ಬಿ ಮ್ಯಾಕ್ಸ್ವೆಲ್ 167, ಪೂಜಾರ ಸಿ ಡೊಹಾರ್ಟಿ ಬಿ ಪ್ಯಾಟಿನ್ಸನ್ 204, ತೆಂಡೂಲ್ಕರ್ ಸಿ ವೇಡ್ ಬಿ ಪ್ಯಾಟಿನ್ಸನ್ 7, ಕೊಹ್ಲಿ ಸಿ ಕೊವನ್ ಬಿ ಮ್ಯಾಕ್ಸ್ವೆಲ್ 34, ಧೋನಿ ಸಿ ಡೊಹಾರ್ಟಿ ಬಿ ಮ್ಯಾಕ್ಸ್ವೆಲ್ 44, ಜಡೇಜಾ ಕಾಟ್ ಅಂಡ್ ಬೌಲ್ಡ್ ಮ್ಯಾಕ್ಸ್ವೆಲ್ 10, ಅಶ್ವಿನ್ ಸಿ ಹ್ಯೂಸ್ ಬಿ ಡೊಹಾರ್ಟಿ 1, ಹರ್ಭಜನ್ ಸಿ ಮ್ಯಾಕ್ಸ್ವೆಲ್ ಬಿ ಡೊಹಾರ್ಟಿ 0, ಭುವನೇಶ್ವರ್ ಸ್ಟಂಪ್ ವೇಡ್ ಬಿ ಡೊಹಾರ್ಟಿ 10, ಇಶಾಂತ್ ಅಜೇಯ 2. ಇತರೆ 18.
ವಿಕೆಟ್ ಪತನ: 2-387, 3-393, 4-404, 5-460, 6-484, 7-485, 8-489, 9-491, 10-503.
ಬೌಲಿಂಗ್: ಪ್ಯಾಟಿನ್ಸನ್ 29-11-80-2, ಸಿಡ್ಲ್ 31-6-92-1, ಹೆನ್ರಿಕೇಸ್ 21-7-45-0, ಡೊಹಾರ್ಟಿ 46.1-15-131-3, ಮ್ಯಾಕ್ಸ್ವೆಲ್ 26-2-127-4, ವಾರ್ನರ್ 1-0-14-0,
ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ 74/2
(ಸೋಮವಾರ ದಿನಾಂತ್ಯಕ್ಕೆ)
ಕೊವನ್ ಅಜೇಯ 26, ವಾರ್ನರ್ ಬಿ ಅಶ್ವಿನ್ 26, ಹ್ಯೂಸ್ ಬಿ ಅಶ್ವಿನ್ 0, ವ್ಯಾಟ್ಸನ್ ಅಜೇಯ 9. ಇತರೆ 13
ವಿಕೆಟ್ ಪತನ: 1-56, 2-56
ಬೌಲಿಂಗ್: ಭುವನೇಶ್ವರ್ 6-4-7-0, ಅಶ್ವಿನ್ 15-6-42-2, ಹರ್ಭಜನ್ 8-5-10-0, ಜಡೇಜಾ 3-2-2-0