ಒಬ್ಳೇ ಆಡಲ್ಲ...
ಇನ್ನು ಮುಂದೆ ಟೆನ್ನಿಸ್ ಅಂಕಣದಲ್ಲಿ ಮೂಗುತಿ ಸುಂದರಿಯ ದರ್ಶನ ಅಪರೂಪವಾಗಬಹುದು. ಇಂತಹದೊಂದು ಬೇಸರದ ಸುದ್ದಿಯನ್ನು ಹೊರಗೆಡವಿರುವುದು ಸ್ವತಃ ಸಾನಿಯಾ ಮಿರ್ಜಾ. 'ನನ್ನ ದೇಹಕ್ಕೆ ಸುಸ್ತಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಐದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಹೀಗಾಗಿ ನನ್ನ ಮುಂದಿರುವ ಆಯ್ಕೆಗಳು ಕೇವಲ ಎರಡು. ಸಿಂಗಲ್ಸ್ ಮತ್ತು ಡಬಲ್ಸ್ ಎರಡನ್ನೂ ಆಡಬೇಕೊ ಅಥವಾ ಸಿಂಗಲ್ಸ್ ವಿದಾಯ ಹೇಳಿ ಸಾಧ್ಯವಾದಷ್ಟು ದೀರ್ಘ ಕಾಲ ಡಬಲ್ಸ್ನಲ್ಲಿ ಮಾತ್ರ ಆಡಬೇಕೊ ಎನ್ನುವುದು. ಸಿಂಗಲ್ಸ್ಗೆ ಸದ್ಯವೇ ವಿದಾಯ ಹೇಳಿ ಡಬಲ್ಸ್ನತ್ತ ಹೆಚ್ಚು ಗಮನ ಹರಿಸಲು ಆಲೋಚಿಸುತ್ತಿದ್ದೇನೆ' ಎಂದಿದ್ದಾಳೆ ಸಾನಿಯಾ. ಇತ್ತೀಚೆಗಷ್ಟೆ ಆಕೆ ಬಿ.ಮಟೆಕ್ ಸ್ಯಾಂಡ್ಸ್ ಜತೆಗೂಡಿ ದುಬೈ ಓಪನ್ಸ್ನಲ್ಲಿ ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾಳೆ.