ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

'ಲಯಾನ್ ಕೈಬಿಟ್ಟು ಆಸೀಸ್ ತಪ್ಪು ಮಾಡಿತು'

Mainashree
Updated On : 4 Mar 2013, 10:46 am

ನವದೆಹಲಿ: ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ತಂಡ ಆಫ್‌ಸ್ಪಿನ್ನರ್ ನಾಥನ್ ಲೆಯಾನ್ ಅವರನ್ನು ಕೈಬಿಟ್ಟಿದ್ದು, ತಂಡದ ತಂತ್ರಗಾರಿಕೆಯಲ್ಲಿನ ತಪ್ಪು ಎಂದು ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ಲೆಯಾನ್ ಅವರನ್ನು ತಂಡದಿಂದ ಹೊರಗಿಟ್ಟ ಹಿನ್ನಲೆಯಲ್ಲಿ ಆಸೀಸ್ ತಂಡದ ಆಡಳಿತ ಮಂಡಳಿ ತೀವ್ರ ಟೀಕೆಗೆ ಗುರಿಯಾಗಿದ್ದು, ಲೆಯಾನ್ ಹೊರಗಿಟ್ಟು ತಪ್ಪು ನಿರ್ಧಾರದ ಹೊಣೆಯನ್ನು ನಾಯಕ ಮೈಕಲ್ ಕ್ಲಾರ್ಕ್ ಹೊತ್ತುಕೊಳ್ಳಬೇಕೆಂದು ದ್ರಾವಿಡ್ ತಿಳಿಸಿದ್ದಾರೆ. ಚೆನೈ ಟೆಸ್ಟ್ ಪಂದ್ಯದಲ್ಲಿ ಅದರಲ್ಲೂ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದು, ನಿಧಾನವಾಗಿ ತಮ್ಮ ಆತ್ಮವಿಶ್ವಾಸ ಕಂಡುಕೊಳ್ಳುತ್ತಿದ್ದರು. ಈ ವೇಳೆ ಅವರನ್ನು ತಂಡದಿಂದ ಕೈ ಬಿಟ್ಟಿರುವುದು ಆಸೀಸ್‌ಗೆ ಹಿನ್ನಡೆಯಾಗಿದೆ ಎಂದು ದ್ರಾವಿಡ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement