5ನೇ ದಿನದ ಹಣ ವಾಪಸ್
ಹೈದರಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ 2ನೇ ಟೆಸ್ಟ್ ಕ್ರಿಕೆಟ್ ಪಂದ್ಯ 4ನೇ ದಿನಕ್ಕೆ ಅಂತ್ಯಗೊಂಡ ಹಿನ್ನೆಲೆಯಲ್ಲಿ, ಕ್ರಿಕೆಟ್ ಅಭಿಮಾನಿಗಳು ಖರೀದಿಸಿದ 5ನೇ ದಿನದ ಟೆಕೆಟ್ಗಳ ಹಣವನ್ನು ವಾಪಸ್ ನೀಡಲು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ತೀರ್ಮಾನಿಸಿದೆ. 5ನೇ ದಿನದ ತಮ್ಮ ಟಿಕೆಟ್ಗಳನ್ನು ಹಿಂತಿರುಗಿಸಿ 'ಈ- ಸೇವಾ' ಮೂಲಕ ಹಣವನ್ನು ವಾಪಸ್ ಪಡೆಯಲು ಅದು ಟೆಕೆಟ್ ಖರೀದಿಸಿದವರಿಗೆ ಸೂಚಿಸಿದೆ. ಆನ್ಲೈನ್ ಮೂಲಕ ಟಿಕೆಟ್ ಖರೀದಿಸಿದವರು ಸಿಕಂದರ್ಬಾದ್ನಲ್ಲಿರುವ ಜಿಮ್ಕಾನಾ ಮೈದಾನದಲ್ಲಿ ತಮ್ಮ ಟಿಕೆಟ್ಗಳನ್ನು ಮರಳಿಸಬಹುದಾಗಿದೆ. ಮಾರ್ಚ್ 7ರೊಳಗೆ ಟಿಕೆಟ್ ಹಿಂತಿರುಗಿಸಲು ಸೂಚಿಸಲಾಗಿದೆ.