ದೇವಧರ ಟ್ರೋಫಿ: ವಿನಯ್ ಕುಮಾರ್ ಉಪನಾಯಕ
ಬೆಂಗಳೂರು: ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ತಮಿಳುನಾಡಿನ ದಿನೇಶ್ ಕಾರ್ತಿಕ್ ದೇವಧರ್ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ತಂಡವನ್ನು ಮುನ್ನಡೆಸಲಿದ್ದಾರೆ.
ಕರ್ನಾಟಕದ ಆರ್. ವಿನಯ್ ಕುಮಾರ್ ಅವರು ಉಪನಾಯಕರಾಗಿದ್ದಾರೆ. ಗುವಾಹತಿಯಲ್ಲಿ ಭಾನುವಾರ ನಡೆಯಲಿರುವ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ತಂಡ ಪೂರ್ವ ವಲಯವನ್ನು ಎದುರಿಸಲಿದೆ. ರಾಬಿನ್ ಉತ್ತಪ್ಪ, ಅಭಿಮನ್ಯು ಮಿಥುನ್ ಸೇರಿದಂತೆ ಕರ್ನಾಟಕದ ಆರು ಆಟಗಾರರು ತಂಡದಲ್ಲಿದ್ದಾರೆ.
ದಕ್ಷಿಣ ವಲಯ ತಂಡ: ದಿನೇಶ್ ಕಾರ್ತಿಕ್ (ನಾಯಕ), ಆರ್. ವಿನಯ್ ಕುಮಾರ್ (ಉಪ ನಾಯಕ), ರಾಬಿನ್ ಉತ್ತಪ್ಪ, ಕೆಎಲ್ ರಾಹುಲ್, ಸಿಎಂ. ಗೌತಮ್, ಬಿ ಅಪರಾಜಿತ, ಅಭಿಮನ್ಯು ಮಿಥುನ್, ಕೆ. ಶ್ರೀಕರ್ ಭರತ್, ಎಸ್. ಸಂದೀಪ್ ವಾರಿಯರ್, ಆಶೀಶ್ ರೆಡ್ಡಿ, ಜಿ.ಎಚ್ ವಿಹಾರಿ ಹಾಗೂ ಸಂಜೂ ಎಸ್ ವಿಶ್ವನಾಥನ್.
ಮೀಸಲು ಆಟಗಾರರು: ರೋಹನ್ ಪ್ರೇಮ್, ಸುಗುಣ್ ಕಮತ್, ರಾಹಿಲ್ ಯಶಾ, ಪ್ರಶಾಂತ್ ಪರಮೇಶ್ವರನ್.