ಧೋನಿ ಯಶಸ್ವಿ ಟೆಸ್ಟ್ ನಾಯಕ
ಹೈದರಾಬಾದ್: ಭಾರತದ ಯಶಸ್ವಿ ಟೆಸ್ಟ್ ಕ್ರಿಕೆಟ್ ನಾಯಕ ಎಂಬ ಖ್ಯಾತಿಗೆ ಮಹೇಂದ್ರ ಸಿಂಗ್ ಧೋನಿ ಅವರು ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಹೈದರಾಬಾದ್‌ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಜಯ ಸಾಧಿಸಿದ ನಂತರ ಧೋನಿ ಈ ಖ್ಯಾತಿಗೆ ಪಾತ್ರರಾದರು.
2007ರಲ್ಲಿ ಟಿ20 ವಿಶ್ವಕಪ್ ಗೆದ್ದ ಮತ್ತು 2011ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಎನಿಸಿದ್ದ ಧೋನಿ, ಈಗ 22 ಟೆಸ್ಟ್ ಪಂದ್ಯ ಗೆದ್ದ ಭಾರತ ತಂಡದ ನಾಯಕ ಎನಿಸಿದ್ದಾರೆ. ಈಗ ಅವರು ಭಾರತ ತಂಡದ ಮಾಜಿ ನಾಯಕ ಗಂಗೂಲಿ ಅವರನ್ನು ಹಿಂದಿಕ್ಕಿದ್ದಾರೆ. ಗಂಗೂಲಿ ನಾಯಕರಾಗಿ 21 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು.
14 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಮೊಹ್ಮದ್ ಅಜರುದ್ದೀನ್ 3ನೇ ಸ್ಥಾನದಲ್ಲಿದ್ದರೆ, ತಲಾ 9 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಮನ್ಸೂರ್ ಅಲಿ ಖ್ ಪಟೌಡಿ ಮತ್ತು ಸುನಿಲ್ ಗವಾಸ್ಕರ್ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ.