ಲೋರ್ಗತ್ ನೇಮಕ ಬಗ್ಗೆ ಚರ್ಚಿಸಿದ ಬಿಸಿಸಿಐ
ಜೋಹಾನ್ಸ್ಬರ್ಗ್: ಐಸಿಸಿ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೂನ್ ಲೋರ್ಗತ್ಅವರನ್ನು, ತನ್ನ ಮುಖ್ಯ ನಿರ್ವಾಹಕ ಅಧಿಕಾರಿಯನ್ನಾಗಿ ನೇಮಕ ಮಾಡಿಕೊಳ್ಳುತ್ತಿರುವ ಬಗ್ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ನಿರ್ದೇಶಕರೊಂದಿಗೆ ಬಿಸಿಸಿಐ ಚರ್ಚೆ ನಡೆಸಿದೆಯಂತೆ.
ಐಸಿಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಲೋರ್ಗತ್ಮತ್ತು ಬಿಸಿಸಿಐ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಲೋರ್ಗತ್ ಅವರನ್ನು ಆಯ್ಕೆ ಮಾಡಿಕೊಂಡರೆ ದಕ್ಷಿಣ ಆಫ್ರಿಕಾ ಪ್ರವಾಸವನ್ನೇ ರದ್ದುಗೊಳಿಸುವುದಾಗಿ ಭಾರತ ಹೇಳಿದೆ ಎಂದು ತಿಳಿದು ಬಂದಿದೆ. 'ಹರೂನ್ ಲೋರ್ಗತ್ಅವರನ್ನು ನೇಮಕ ಮಾಡಿಕೊಳ್ಳುವ ಕುರಿತು ಭಾರತ ತನ್ನ ಕಳವಳ ವ್ಯಕ್ತಪಡಿಸಿದೆ' ಎಂದು ದಕ್ಷಿಣ ಆಫ್ರಿಕಾ ನಿರ್ದೇಶಕ ಮತ್ತು ಮಾಜಿ ಅಧ್ಯಕ್ಷ ನಾರ್ಮನ್ ಅರೆಂಡ್ಸ್ ಮಂಗಳವಾರ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.