ಅರ್ಹತಾ ಸುತ್ತಿನಲ್ಲೇ ಸೋತ ಸೋಮ್
ಇಂಡಿಯನ್ ವೆಲ್ಸ್ (ಅಮೆರಿಕಾ): ಭಾರತದ ಸಿಂಗಲ್ಸ್ ಟೆನಿಸ್ ತಾರೆ ಸೋಮ್ದೇವ್ ದೇವ್ವರ್ಮನ್ ಇಂಡಿಯನ್ ವೆಲ್ಸ್ ವೆಲ್ಸ್ ಎಟಿಪಿ ಮಾಸ್ಟರ್ಸ್ ಪಂದ್ಯಾವಳಿಯ ಪ್ರಮುಖ ಸುತ್ತಿಗೆ ಪ್ರವೇಶಿಸುವಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಸೋಮ್ದೇವ್ ಇಂಡಿಯನ್ ವೆಲ್ಸ್ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲೇ 27ನೇಶ್ರೇಯಾಂಕ ಪಡೆದಿದ್ದ ಇಟಿಲಿಯ ಮಟ್ಟೆ ವೈಲಾ ವಿರುದ್ಧ 2-6, 2-6 ನೇರ ಸೆಟ್ಗಳ ಅಂತರದಿಂದ ಪರಾಭವಗೊಂಡಿದ್ದಾರೆ. ವಿಶ್ವ ರ್ಯಾಂಕಿಂಗ್ನಲ್ಲಿ 250ನೇ ಸ್ಥಾನ ಹೊಂದಿರುವ ಸೋಮ್ದೇವ್ 6ನೇ ಬಾರಿಗೆ ಈ ಪಂದ್ಯಾವಳಿಯ ಆರಂಭಿಕ ಸುತ್ತಿನಲ್ಲಿ ಸೋಲನುಭವಿಸಿದ್ದಾರೆ.