ಆಜ್ಲಾನ್ ಶಾಗೆ ಶ್ರೀವಾತ್ಸವ್ ಮ್ಯಾನೇಜರ್
ಭೂಪಾಲ್: ಮಧ್ಯಪ್ರದೇಶದ ಕ್ರೀಡಾ ಇಲಾಖೆಯ ನಿರ್ದೇಶಕ ಡಾ. ಶೈಲೇಂದ್ರ ಶ್ರಿವಾಸ್ತವ್ ಆಜ್ಲಾನ್ ಶಾ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡದ ವ್ಯವಸ್ಥಾಪಕರಾಗಿ ನೇಮಕಗೊಂಡಿದ್ದಾರೆ. ಆಜ್ಲಾನ್ ಶಾ ಹಾಕಿ ಪಂದ್ಯಾವಳಿ ಮಲೇಷ್ಯಾದಲ್ಲಿ ಮಾರ್ಚ್ 9ರಿಂದ 17ರವರೆಗೆ ನಡೆಯಲಿದೆ. ಹೀಗಾಗಿ ವಿದೇಶಕ್ಕೆ ತೆರಳಲು ಅವಕಾಶ ನೀಡುವಂತೆ ಶ್ರೀವಾಸ್ತವ್, ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಅವರು ಮಲೇಷ್ಯಾದ ಐಫೋಕ್ಕೆ ತೆರಳಲಿದ್ದಾರೆ. ಒಂದು ವೇಳೆ ಪಂದ್ಯಾವಳಿಯಲ್ಲಿ ಭಾರತ ಫೈನಲ್ ಪ್ರವೇಶಿಸಿದರೆ, ಪಂದ್ಯ ವೀಕ್ಷಿಸಲು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಣ್ ತೆರಳಲಿದ್ದಾರೆ ಎಂದು ಮೂಲಗಳು ಹೇಳಿವೆ.