ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯನ್ ಅಥ್ಲೆಟಿಕ್ಸ್ ಕೊಲಂಬೊಕ್ಕೆ

Mainashree
Updated On : 6 Mar 2013, 11:32 am

ನವದೆಹಲಿ: ಚೆನ್ನೈನಲ್ಲಿ ನಡೆಯಬೇಕಿದ್ದ ಏಷ್ಯನ್ ಅಥ್ಲೆಟಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸಲು ತಮಿಳುನಾಡು ನಿರಾಕರಿಸಿದ ಹಿನ್ನೆಲೆಯಲ್ಲಿ, ಶ್ರೀಲಂಕಾದ ರಾಜಧಾನಿ ಕೊಲಂಬೊ ಈಗ ಕ್ರೀಡಾಕೂಟದ ಆತಿಥ್ಯ ವಹಿಸಲಿದೆ. ಕ್ರೀಡಾಕೂಟ ಜುಲೈ 3ರಿಂದ 7ರವರೆಗೆ ಚೆನ್ನೈನಲ್ಲಿ ನಡೆಯಬೇಕಾಗಿತ್ತು. ಆದರೆ, ತಮಿಳುನಾಡು ಸರ್ಕಾರ ಆತಿಥ್ಯ ವಹಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಏಷ್ಯನ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಈ ತೀರ್ಮಾನ ತೆಗೆದುಕೊಂಡಿದೆ.  ಇದು 3ನೇ ಹಂತದ ಏಷ್ಯನ್ ಅಥ್ಲೆಟಿಕ್ಸ್ ಕ್ರೀಡಾಕೂಟವಾಗಿದ್ದು, ಮೇ 12ರಿಂದ ಕೊಲಂಬೊದಲ್ಲಿ ನಡೆಯಲಿದೆ. ಹತ ಎಲ್‌ಟಿಟಿಇ ಮುಖ್ಯಸ್ಥ ವಿ. ಪ್ರಭಾಕರನ್ ಪುತ್ರನನ್ನು ಲಂಕಾ ಸೇನೆ ಹತ್ಯೆ ಮಾಡಿದೆ  ಎಂದು ವರದಿಯಾದ ಹಿನ್ನೆಲೆಯಲ್ಲಿ, ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಶ್ರೀಲಂಕಾ ಅಥ್ಲೀಟ್‌ಗಳಿಗೆ ರಾಜ್ಯದಲ್ಲಿ ಸ್ಥಾನವಿಲ್ಲ ಎಂದು ಫೆಬ್ರುವರಿ 21ರಂದು ಹೇಳಿದ್ದರು. ಆದರೆ, ಕೊಲಂಬೊಕ್ಕೆ ಚಾಂಪಿಯನ್‌ಷಿಪ್ ಸ್ಥಳಾಂತರ ಗೊಂಡ ನಂತರವೂ ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ದೇಶದಲ್ಲೇ ಬದಲಿ ಸ್ಥಳ ಹುಡಕುವ ವಿಶ್ವಾಸದಲ್ಲೇ ಇದೆ. ಏಷ್ಯನ್ ಅಥ್ಲೆಟಿಕ್ಸ್ ಕ್ರೀಡಾಕೂಟದ ಮೊದಲ ಎರಡು ಹಂತದ ಕ್ರೀಡಾಕೂಟಗಳು ಮೇ 5ರಿಂದ ಬ್ಯಾಂಕಾಕ್‌ನಲ್ಲಿ ಮೇ 8ರಿಂದ ಥಾಯ್ಲೆಂಡ್‌ನಲ್ಲಿ ನಡೆಯಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement