ಕ್ಲಾರ್ಕ್ ಪಡೆ ವಿರುದ್ಧ ಆಸೀಸ್ ಮಾಧ್ಯಮಗಳ ಕೆಂಗಣು
ಮೆಲ್ಬರ್ನ್: ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದ ಆಸೀಸ್ ತಂಡ ಈಗ ತನ್ನ ದೇಶದ ಮಾಧ್ಯಮಗಳ ಕೆಂಗಣಿಗೆ ಗುರಿಯಾಗಿದೆ. ಹೈದರಬಾದ್ನಲ್ಲಿ ನಡೆದಿದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಆಸೀಸ್ ಮಾಧ್ಯಮಗಳು ಕಾಂಗರೂ ಪಡೆಯನ್ನು ಟೀಕಿಸಿವೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್ಗಳಿಗೆ ಆಸೀಸ್ ತಂಡ ಶರಣಾಗಿದನ್ನು ಆಸೀಸ್ನ ಮಾಧ್ಯಮಗಳು 'ದಿ ಹೈದರಬಾದ್ ಹಾರರ್ ಶೋ ಆನ್ ಎ ಡಾರ್ಕ್ ಡೇ' ಎಂದು ಬಣಿಸಿವೆ.
ಈ ರೀತಿಯಾದ ಹೀನಾಯ ಪ್ರದರ್ಶನವನ್ನು ಆಸೀಸ್ ಕ್ರಿಕೆಟ್ ಅಭಿಮಾನಿಗಳು ಎಂದು ಕಂಡಿರಲಿಲ್ಲ. ಎರಡನೇ ಪಂದ್ಯದಲ್ಲಿ ಆಸೀಸ್ ತಂಡ ಸ್ವಯಂಕೃತ ಅಪರಾಧದಿಂದ ಸೋಲನುಭವಿಸಿರುವುದು ಬೇಸರದ ಸಂಗತಿಯಾಗಿದೆ.
ಭಾರತದಲ್ಲಿ ನಾಯಕ ಕ್ಲಾರ್ಕ್ ನೀಡುತ್ತಿರುವ ಪ್ರದರ್ಶನವನ್ನು ಉಳಿದ ಯಾವುದೇ ಬ್ಯಾಟ್ಸ್ಮನ್ಗಳು ತೋರುತ್ತಿಲ್ಲ.
ನಾಯಕ ಕ್ಲಾರ್ಕ್ ಎರಡೂ ಪಂದ್ಯಗಳ ಮೊದಲ ಇನಿಂಗ್ಸ್ನಲ್ಲಿ ಒತ್ತಡದ ಸಂದರ್ಭದಲ್ಲೂ ಕ್ರಮವಾಗಿ 130 ಹಾಗೂ 91 ರನ್ಗಳಿಸುವ ಮೂಲಕ ಅಗ್ರ ಸ್ಥಾನದಲ್ಲಿದ್ದರೆ ಉಳಿದ ಯಾವುದೇ ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ನೀಡಿಲ್ಲ.
ಆ್ಯಶಸ್ ಸರಣಿಗೆ ಇನ್ನು 16 ವಾರಗಳು ಬಾಕಿ ಇದ್ದು, ಈ ರೀತಿಯಾದ ಸಂಕಷ್ಟಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಸಿಲುಕ ಬಾರದಿತ್ತು.
ಇದು ಆಸೀಸ್ ತಂಡದ ಹೀನಾಯ ಪ್ರದರ್ಶನ ಹಾಗೂ ಇದೊಂದು ಕರಾಳ ದಿನ ಎಂದು ತಿಳಿಸಿವೆ. ಹಾಗೆಯೇ ಎರಡನೇ ಟೆಸ್ಟ್ ಪಂದ್ಯದ ವೇಳೆ ಆಸೀಸ್ನ ಬ್ಯಾಟ್ಸ್ಮನ್ಗಳು 237 ನಿಮಿಷಗಳಲ್ಲಿ ಗುರಿಯಿಲ್ಲದಂತೆ ಅಡ್ಡಾದಿಡ್ಡಿಯಾಗಿ ಬ್ಯಾಟಿಂಗ್ ನಡೆಸಿದ್ದು, ಹೈದರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣ ಕ್ರಿಕೆಟ್ನ ಕಸಾಯಿಖಾನೆಯಂತೆ ಕಾಣುತ್ತಿತ್ತು ಎಂದು ಆಸೀಸ್ ಪತ್ರಿಕೆಯೊಂದು ವರಿಸಿದೆ.