ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತಕ್ಕೆ ಎಫ್‌ಐಎಚ್‌ನ 2 ಪಂದ್ಯಾವಳಿ ಆತಿಥ್ಯ

Mainashree
Updated On : 6 Mar 2013, 11:31 am

ಲಾವುಸನ್ನೆ: ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ನ (ಎಫ್‌ಐಎಚ್) ಪುರುಷರ ಜೂನಿಯರ್ ವಿಶ್ವಕಪ್ ಮತ್ತು ವಿಶ್ವ ಲೀಗ್ ಫೈನಲ್ಸ್ ಪಂದ್ಯಾಳಿಯ ಆತಿಥ್ಯವನ್ನು ಭಾರತ ವಹಿಸಲಿದೆ. ಎಫ್‌ಐಎಚ್ ಬುಧವಾರ ಈ ಕುರಿತು ತಿಳಿಸಿದೆ.
ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿ ವರ್ಷಾಂತ್ಯದಲ್ಲಿ ಡಿಸೆಂಬರ್ 6ರಿಂದ 15ರವರೆಗೆ ನಡೆಯಲಿದ್ದು, ವಿಶ್ವ ಲೀಗ್ ಫೈನಲ್ಸ್ ಬರುವ ವರ್ಷ ಜನವರಿ 10ರಿಂದ 18ರವರೆಗೆ ನಡೆಯಲಿದೆ.
ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಪಂದ್ಯಾವಳಿಯಲ್ಲಿ ಅಗ್ರ 16 ತಂಡಗಳು ಭಾಗವಹಿಸಲಿವೆ.
ವಿಶ್ವ ಲೀಗ್ ಫೈನಲ್ಸ್ ಹಾಕಿ ಪಂದ್ಯಾವಳಿ ಎರಡು ವರ್ಷಗಳಿಗೊಮ್ಮೆ ನಡೆಯಲಿದೆ. ವಿಶ್ವ ಹಾಕಿ ಲೀಗ್‌ಗಾಗಿ ನಾಲ್ಕು ಸುತ್ತುಗಳಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ 60ಕ್ಕೂ ಹೆಚ್ಚು ರಾಷ್ಟ್ರಗಳ ಪುರುಷರ ತಂಡಗಳು ಭಾಗವಹಿಸಲಿವೆ.
'ವಿಶ್ವ ಹಾಕಿ ಲೀಗ್ ಪೈನಲ್ಸ್ ಉದ್ಘಾಟನಾ ಪಂದ್ಯಾವಳಿಗೆ ಭಾರತಕ್ಕಿಂತ ಉತ್ತಮ ಸ್ಥಳ ಇನ್ನೊಂದಿಲ್ಲ. ಈ ಪಂದ್ಯಾವಳಿ ಆತಿಥ್ಯ ನೀಡುವುದರೊಂದಿಗೆ ಭವಿಷ್ಯದಲ್ಲಿ ಭಾರತದ ಹಾಕಿಗೆ ಹೊಸ ಕಳೆ ಬರಲಿದೆ' ಎಂದು ಎಫ್‌ಐಎಚ್ ಅಧ್ಯಕ್ಷ ಲಿಯಾಂಡ್ರೋ ನೆಗ್ರೆ ಹೇಳಿದ್ದಾರೆ.
ಜೂನಿಯರ್ ವಿಶ್ವಕಪ್ ಕಪ್ ಹಾಕಿಯಲ್ಲಿ ಭಾಗಹಿಸುವ 16 ತಂಡಗಳು ಇಂತಿವೆ. ಅರ್ಜೆಂಟೀನಾ, ಆಸ್ಟ್ರೇಲಿಯಾ, ಬೆಲ್ಜಿಯಂ, ಕೆನಡಾ, ಇಂಗ್ಲೆಂಡ್, ಸ್ಪೇನ್, ಈಜಿಪ್ಟ್, ಫ್ರಾನ್ಸ್, ಜರ್ಮನಿ, ಭಾರತ, ಕೊರಿಯಾ, ಮಲೇಷ್ಯಾ, ಹಾಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement