ಮೊದಲ ದಿನ ಮಳೆಗೆ ಆಹುತಿ
ಡುನೆದಿನ್: ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಬುಧವಾರ ಆರಂಭವಾಗಿದ್ದು, ಪಂದ್ಯದ ಮೊದಲ ದಿನ ಮಳೆಗೆ ಆಹುತಿಯಾಗಿದೆ.
ನ್ಯೂಜಿಲೆಂಡ್ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತಾದರೂ ಮಳೆ ಹೆಚ್ಚಾಗಿ ಸುರಿದ ಪರಿಣಾಮ ಮೊದಲ ದಿನ ಒಂದು ಎಸೆತವನ್ನು ಕೂಡ ಆಡಲು ಸಾಧ್ಯವಾಗಲಿಲ್ಲ.
ಅತಿಯಾದ ಮಳೆ ಸುರಿದ ಪರಿಣಾಮ ಹಾಗೂ ಪಂದ್ಯವಾಡಲು ಸರಿಯಾದ ಬೆಳಕು ಇಲ್ಲದ ಹಿನ್ನಲೆಯಲ್ಲಿ ಅಂಪೈರ್ಗಳಾದ ಆಸ್ಟ್ರೇಲಿಯಾದ ಪೌಲ್ ರೆಫೆಲ್ ಹಾಗೂ ಪಾಕಿಸ್ತಾನದ ಅಸಾದ್ ರಾಫ್ ಪಂದ್ಯದ ಮೊದಲ ದಿನವನ್ನು ರದ್ದು ಮಾಡಿದರು.