'ಸೆಹ್ವಾಗ್ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು'
ನವದೆಹಲಿ: ಕಳೆದ ಕೆಲ ಸರಣಿಗಳಿಂದ ಫಾರ್ಮ್ ಕಳೆದುಕೊಂಡಿರುವ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಸ್ಥಾನದ ಬಗ್ಗೆ ಆಯ್ಕೆಗಾರರು ಚಿಂತನೆ ನಡೆಸಬೇಕಿದೆ ಎಂದು ಭಾರತ ಮಾಜಿ ನಾಯಕ ರಾಹುಲ್ ದ್ರಾವಿಡ್ ಅಭಿಪ್ರಾಯ ಪಟ್ಟಿದ್ದಾರೆ.
ಇದೇ ವರ್ಷಾಂತ್ಯಕ್ಕೆ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಈ ಪ್ರವಾಸದಲ್ಲಿ ಸೆಹ್ವಾಗ್ ಆರಂಭಿಕರಾಗಿ ಕಣಕ್ಕಿಳಿಯಬೇಕೆ ಅಥವಾ ಅವರ ಸ್ಥಾನದಲ್ಲಿ ಬೇರೆಯವರನ್ನು ಆಡಿಸಬೇಕೆ ಎಂಬ ಬಗ್ಗೆ ಆಯ್ಕೆಗಾರರು ಚಿಂತನೆ ನಡೆಸಬೇಕು ಎಂದು ದ್ರಾವಿಡ್ ತಿಳಿಸಿದ್ದಾರೆ.