ಕಶ್ಯಪ್, ಸಿಂಧು ಪ್ರೀ ಕ್ವಾರ್ಟರ್ಫೈನಲ್ಗೆ
ದೇಶದ ಅಗ್ರ ಬ್ಯಾಡ್ಮಿಂಟನ್ ತಾರೆ ಪರುಪಲ್ಲಿ ಕಶ್ಯಪ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಪ್ರೀ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ...
ಬರ್ಮಿಂಗ್ಹ್ಯಾಮ್: ದೇಶದ ಅಗ್ರ ಬ್ಯಾಡ್ಮಿಂಟನ್ ತಾರೆ ಪರುಪಲ್ಲಿ ಕಶ್ಯಪ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಪ್ರೀ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.
ಕಶ್ಯಪ್ 43 ನಿಮಿಷಗಳ ಕಾಲ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ತೈಪೇಯ ಹಾವೋ ಸೂ ಅವರನ್ನು 21-17, 21-18 ನೇರ ಸೆಟ್ಗಳ ಅಂತರದಿಂದ ಸೋಲಿಸಿದರು. ಕಶ್ಯಪ್ ಈಗ ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 7ನೇ ಶ್ರೇಯಾಂಕ ಪಡೆದಿರುವ ಜಪಾನ್ನ ಕೆನಿಚಿ ಟಾಗೋ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಮುಖ ಸುತ್ತಿಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿರುವ ಸೌರಭ್ ವರ್ಮಾ ಸಹ ಪ್ರೀ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. ಇಂಡೋನೇಷ್ಯಾದ ಹಾಯೋವ್ ರುಂಬಾಕಾ ವಿರುದ್ಧ 10-21, 21-14, 24-22 ಸೆಟ್ಗಳಿಂದ ಜಯ ಕಂಡ ವರ್ಮಾ ಪ್ರೀ ಕ್ವಾರ್ಟರ್ಗೆ ಲಗ್ಗೆ ಹಾಕಿದರು. ವರ್ಮಾ ಪ್ರೀ ಕ್ವಾರ್ಟರ್ನಲ್ಲಿ ವೀಯಟ್ನಾಂನ ಟೀನ್ ಮಿನ್ಹಾ ಗುಯೇನ್ ಅವರನ್ನು ಎದುರಿಸಲಿದ್ದಾರೆ.
ಇನ್ನು ಮಹಿಳೆಯರ ಸಿಂಗಲ್ಸ್ನಲ್ಲಿ ಸೈನಾ ನೆಹ್ವಾಲ್ ಬುಧವಾರವೇ ಪ್ರೀ ಕ್ವಾರ್ಟರ್ಫೈನಗೆ ಪ್ರವೇಶಿಸಿದರೆ, ಗುರುವಾರ ಪಿ.ವಿ ಸಿಂಧು ಪ್ರೀ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.
ಸಿಂಧು ಆರಂಭಿಕ ಸುತ್ತಿನಲ್ಲಿ ಥಾಯ್ಲೆಂಡ್ನ ಬುಸಾನಾನ್ ಒಂಗ್ಬಾಮ್ರುನ್ಗಾಪನ್ ಅವರನ್ನು 21-13, 21-18 ನೇರ ಸೆಟ್ಗಳಿಂದ ಸುಲಭವಾಗಿ ಮಣಿಸಿದರು. ಮಿಶ್ರಡಬಲ್ಸ್ ವಿಭಾಗದಲ್ಲಿ ವಿ. ಡಿಜು ಮತ್ತು ಜ್ವಾಲಾ ಗುಟ್ಟಾ ಜೋಡಿ ಪ್ರಿ ಕ್ವಾರ್ಟರ್ಫೈನಲ್ಗೆ ಪ್ರವೇಶಿಸಿದೆ. ಡಿಜು- ಜ್ವಾಲಾ ಜೋಡಿ ಆರಂಭಿಕ ಸುತ್ತಿನಲ್ಲಿ ಜರ್ಮನಿಯ ಪೀಟರ್ ಕೆಸ್ಬೌರ್ ಮತ್ತು ಇಸಾಬೆಲ್ ಹೆಟ್ರಿಚ್ ಜೋಡಿ ವಿರುದ್ಧ 21-9, 21-17 ಸೆಟ್ಗಳಿಂದ ಜಯ ಸಾಧಿಸಿತು.