ಮಾಜಿ ಆಟಗಾರರು ಮತ್ತೆ ಕಣಕ್ಕೆ
ಲಾಹೋರ್: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಭಾರತ ಹಾಗೂ ಪಾಕ್ನ ಖ್ಯಾತ ಮಾಜಿ ಆಟಗಾರರು ಮತ್ತೆ ಕಣಕ್ಕಿಳಿಯಲಿದ್ದು, ಮುಂದಿನ ತಿಂಗಳು ಶಾರ್ಜಾದಲ್ಲಿ ನಡೆಯಲಿರುವ ಎರಡು ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಈ ಸರಣಿ ಏ.18 ಹಾಗೂ ಏ.20 ರಂದು ನಡೆಯಲಿದ್ದು, 40 ಓವರ್ನ ಪಂದ್ಯಗಳಾಗಿವೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನಲೆಯಲ್ಲಿ ತಟಸ್ಥ ಸ್ಥಳದಲ್ಲಿ ಪಂದ್ಯವನ್ನಾಡಲು ನಿರ್ಧರಿಸಿದ್ದು, ಶಾರ್ಜಾದಲ್ಲಿ ಈ ಸರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಪಾಕಿಸ್ತಾನ ಹಿರಿಯರ ಕ್ರಿಕೆಟ್ ಅಸೋಸಿಯೇಷನ್ನ ಮುಖ್ಯಸ್ಥ ಫಾವದ್ ಇಜಾಜ್ ತಿಳಿಸಿದ್ದಾರೆ.