ರಾಯಲ್ಸ್ಗೆ 4 ಹೊಸ ಆಟಗಾರರು
ಮುಂಬೈ: ಬಹು ನಿರೀಕ್ಷಿತ ಐಪಿಎಲ್ 6ನೇ ಆವೃತ್ತಿಗೆ ಕೆಲವೇ ದಿನಗಳು ಬಾಕಿ ಇದ್ದು, ರಾಜಸ್ಥಾನ್ ರಾಯಲ್ಸ್ ತಂಡ ನಾಲ್ವರು ಹೊಸ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಸಿದ್ಧತೆ ನಡೆಸುತ್ತಿದೆ. ಕೇರಳದ ಏಕದಿನ ತಂಡದ ನಾಯಕ ಸಚಿನ್ ಬೇಬಿ, ವಿಕೆಟ್ ಕೀಪರ್ ಸಂಜು ವಿಶ್ವನಾಥ್ ಸ್ಯಾಮ್ಸನ್, ಮುಂಬೈನ ಎಡಗೈ ಸ್ಪಿನ್ನರ್ ಹರ್ಮಿತ್ ಸಿಂಗ್, ಜಾರ್ಖಡ್ನ ಮಧ್ಯಮ ವೇಗಿ ರಾಹುಲ್ ಶುಕ್ಲಾ ಅವರು ರಾಜಸ್ಥಾನ್ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ರಾಜಸ್ಥಾನ್ ರಾಯಲ್ಸ್ ತಂಡ ತಿಳಿಸಿದೆ. ರಾಜಸ್ಥಾನ್ ತಂಡಕ್ಕೆ ರಾಹುಲ್ ದ್ರಾವಿಡ್ ನಾಯಕತ್ವ ವಹಿಸಲಿದ್ದು, ಪ್ಯಾಡಿ ಅಪ್ಟನ್ ತಂಡದ ಮುಖ್ಯ ಕೋಚ್ ಆಗಿದ್ದಾರೆ.