ಸಭೆ ಕರೆದ ಐಒಸಿ
ನವದೆಹಲಿ: ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಮೇಲಿನ ನಿಷೇಧ ತೆರವುಗೊಳಿಸುವ ಸೂಚನೆಗಳು ಗೋಚರಿಸಿವೆ. ಭಾರತೀಯ ಕ್ರೀಡಾ ಸಚಿವಾಲಯದ ಜತೆಗೆ ಇದೇ ತಿಂಗಳಲ್ಲಿ ಜಂಟಿ ಸಭೆ ನಡೆಸಬೇಕು ಎಂದು ಐಒಸಿ, ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ ತಿಳಿಸಿದೆ. ಸರ್ಕಾರದ ಹಸ್ತಕ್ಷೇಪದ ಹಿನ್ನಲೆಯಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯನ್ನು ನಿಷೇಧಿಸಿದ್ದ ಐಒಸಿ, ಸಂವಿಧಾನ ತಿದ್ದುಪಡಿ ಮೂಲಕ ಮರು ಚುನಾವಣೆಯ ನಡೆಸಿ ಈ ವಿವಾದವನ್ನು ಬಗೆಹರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಲು ಐಒಎಗೆ ಪತ್ರ ಬರೆದಿದೆ. ಈ ವಿಷಯ ಕುರಿತು ಚರ್ಚೆ ನಡೆಸಲು ಲಾವುಸನ್ನೆಯಲ್ಲಿರುವ ನಮ್ಮ ಕಚೇರಿಗೆ ಕ್ರೀಡಾ ಸಚಿವಾಲಯದ ಜತೆ ಆಗಮಿಸಿ, ಐಒಸಿ ಜತೆ ಜಂಟಿ ಸಭೆ ನಡೆಸಬೇಕೆಂದು ಐಒಎಗೆ ಬರೆದ ಪತ್ರದಲ್ಲಿ ತಿಳಿಸಿದೆ.