ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸುನಾಮಿ ಗೆದ್ದಾಕೆ ಏಷ್ಯನ್ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಕಂಚು ಗೆದ್ದಳು

Rashmi Kasaragodu
Updated On : 7 Mar 2013, 10:48 am

ನವದೆಹಲಿ: ಸುನಾಮಿಯಲ್ಲಿ ಬದುಕುಳಿದ ದೆಬೋರಾ ಏಷ್ಯನ್ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿದ್ದಾಳೆ. ಇಂದಿರಾಗಾಂಧಿ ವೆಲೋಡ್ರೋಮ್ನಲ್ಲಿ ಗುರುವಾರ ನಡೆದ ಬಾಲಕಿಯರ 500 ಮೀಟರ್ ಟೈಮ್ ಟ್ರೈಯಲ್ ವಿಭಾಗದಲ್ಲಿ ದೆಬೋರಾ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಬಾಲಕಿ 37.841 ಸೆಕೆಂಡ್ಗಳಲ್ಲಿ ಗುರಿ ತಲುಪುವ ಮೂಲಕ ಕಂಚು ಗೆದ್ದಳು. 37.159 ಸೆಕೆಂಡ್ಗಳಲ್ಲಿ ಗುರಿ ತಲುಪಿದ ಕೊರಿಯಾದ ಯೆನಹೀ ಜಂಗ್ ಈ ವಿಭಾಗದಲ್ಲಿ ಚಿನ್ನ ಗೆದ್ದರೆ, ತೈಪೇಯ ಯೂ ಶಿಯೋ ಚೆಂಗ್ 37.834 ಸೆಕೆಂಡ್ಗಳಲ್ಲಿ ಗುರಿ ತಲುಪುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡಿದ್ದಾಳೆ. ಸ್ಪರ್ಧೆಯ ಆರಂಭದಲ್ಲೇ ದೆಬೋರಾ ಮುಗ್ಗರಿಸಿ ಬಿದ್ದಳು. ಆದರೆ, ಆಕೆಗೆ ಏಳಲೂ ಸಮಯಾವಕಾಶ ನೀಡದೆ ಸ್ಪರ್ಧೆಯನ್ನು ಆರಂಭಿಸಲಾಯಿತು. ಆದಾಗ್ಯೂ, ಸಮಯವನ್ನು ಹೊಂದಿಸಿಕೊಳ್ಳುವಲ್ಲಿ ಯಶಸ್ವಿಯಾದ ಆಕೆ ಪದಕ ಗಿಟ್ಟಿಸಿದಳು.
'ಎಡವಿ ಬಿದ್ದ ನಂತರ ನನಗೆ ಏನೂ ತಿಳಿಯದಾಯಿತು. ಆದರೆ, ನನ್ನಷ್ಟಕ್ಕೆ ನಾನೇ ಶಾಂತ ರೀತಿಯಿಂದ ಇರಲು ನಿರ್ಧರಿಸಿದೆ. ತಕ್ಷಣವೇ ಸ್ಪರ್ಧೆಯಲ್ಲಿ ಚೇತರಿಸಿಕೊಂಡೆ. ಮೊದಲ ಲ್ಯಾಪ್ ಮುಗಿದ ನಂತರ ಪದಕ ಗೆಲ್ಲುವ ಬಗ್ಗೆ ನನಗೆ ಖಚಿತಪಟ್ಟಿತು. ಅಲ್ಲದೆ ನಿರೀಕ್ಷೆಯಂತೆ ಸಾಗಿದ್ದರಿಂದ ನಾನು ಸಂತಸದಿಂದ ಸ್ಪರ್ಧೆ ಮುಗಿಸಿದೆ' ಎಂದು ದೆಬೋರಾ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement