ಸೈನಾ ಕ್ವಾರ್ಟರ್ಗೆ: ಸಿಂಧುಗೆ ಸೋಲು
ಬರ್ಮಿಂಗ್ಹ್ಯಾಮ್: ಭಾರತದ ಖ್ಯಾತಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.
ಸೈನಾ ನೆಹ್ವಾಲ್ ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾದ ಬೆಲಾಟ್ರಿಕ್ಸ್ ಮನುಪುಟಿ ಅವರನ್ನು 21-16, 21-11 ನೇರ ಸೆಟ್ಗಳ ಅಂತರದಿಂದ ಸೋಲಿಸಿ ಕ್ವಾರ್ಟರ್ಫೈನಲ್ಗೆ ಅಡಿ ಇಟ್ಟರು.
ಪುರುಷರ ಸಿಂಗಲ್ಸ್ನಲ್ಲಿ ಪಿ. ಕಶ್ಯಪ್ ಮೊದಲ ಸುತ್ತಿನ ಪಂದ್ಯದಲ್ಲಿ ತೈಪೇಯ ಹಾವೋ ಸೂ ಅವರನ್ನು 21-17, 21-18 ನೇರ ಸೆಟ್ಗಳ ಅಂತರದಿಂದ ಸೋಲಿಸಿದರು. ಕಶ್ಯಪ್ ಈಗ ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 7ನೇ ಶ್ರೇಯಾಂಕ ಪಡೆದಿರುವ ಜಪಾನ್ನ ಕೆನಿಚಿ ಟಾಗೋ ಅವರನ್ನು ಎದುರಿಸಲಿದ್ದಾರೆ.
ಇನ್ನು ಮಹಿಳೆಯರ ಸಿಂಗಲ್ಸ್ನಲ್ಲಿ ಪ್ರೀ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದ ಪಿ.ವಿ ಸಿಂಧು ಕೈಚೆಲ್ಲಿದರು. ಸಿಂಧು ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಜರ್ಮನಿಯ ಜೂಲಿಯನ್ ಶೆಂಕ್ ವಿರುದ್ಧ 21-17 ,21-14 ನೇರ ಸೆಟ್ಗಳಿಂದ ಸೋಲನುಭವಿಸಿದರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಮುಖ ಸುತ್ತಿಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿರುವ ಸೌರಭ್ ವರ್ಮಾ ಸಹ ಪ್ರೀ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. ಇಂಡೋನೇಷ್ಯಾದ ಹಾಯೋವ್ ರುಂಬಾಕಾ ವಿರುದ್ಧ 10-21, 21-14, 24-22 ಸೆಟ್ಗಳಿಂದ ಜಯ ಕಂಡ ವರ್ಮಾ ಪ್ರೀ ಕ್ವಾರ್ಟರ್ಗೆ ಲಗ್ಗೆ ಹಾಕಿದರು. ವರ್ಮಾ ಪ್ರೀ ಕ್ವಾರ್ಟರ್ನಲ್ಲಿ ವೀಯಟ್ನಾಂನ ಟೀನ್ ಮಿನ್ಹಾ ಗುಯೇನ್ ಎದುರಿಸಲಿದ್ದಾರೆ.
ಮಿಶ್ರಡಬಲ್ಸ್ ವಿಭಾಗದಲ್ಲಿ ವಿ. ಡಿಜು ಮತ್ತು ಜ್ವಾಲಾ ಗುಟ್ಟಾ ಜೋಡಿ ಪ್ರೀ ಕ್ವಾರ್ಟರ್ಫೈನಲ್ಲಿ ಸೋಲನುಭವಗಸಿದೆ. ಡಿಜು- ಜ್ವಾಲಾ ಜೋಡಿ ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ರಾಬರ್ಟ್ ಮಟೆಸಿಕ್ ಮತ್ತು ನಾದಿಯೇದಾ ಜೀಯಬೇ ಜೋಡಿ ವಿರುದ್ಧ ವಿರುದ್ಧ 21-17, 21-16 ಸೆಟ್ಗಳಿಂದ ಪರಭಾವ ಹೊಂದಿತು.