ಹಸೀಬ್ ಹಸನ್ ನಿಧನ
ಕರಾಚಿ: ಪಾಕಿಸ್ತಾನದ ಮಾಜಿ ಆಟಗಾರ ಹಾಗೂ ಆಯ್ಕೆಗಾರ ಹಸೀಬ್ ಹಸನ್ ಅನಾರೋಗ್ಯದ ಕಾರಣ ಮೃತಪಟ್ಟಿದ್ದಾರೆ. 73ರ ಹರೆಯದ ಹಸನ್ ಉತ್ತಮ ಕ್ರಿಕೆಟ್ ಆಡಳಿತಗಾರ ಎಂಬ ಖ್ಯಾತಿ ಪಡೆದಿದ್ದು, 1987ರ ವಿಶ್ವಕಪ್ನ ಆಯೋಜನಾ ಸಮಿತಿಯನ್ನು ಮುನ್ನಡೆಸಿದ್ದರು. ಹಾಗೆಯೇ ವಿವಿಧ ದೇಶಗಳ ತಂಡದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಸನ್ ಕ್ರಿಕೆಟ್ ಕ್ರೀಡೆಗೆ ಉತ್ತಮ ಸೇವೆ ಸಲ್ಲಿಸಿದ್ದು, ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತಿದ್ದರು. ಹಸನ್ ಕರಾಚಿಯಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸಿದ್ದರು ಎಂದು ಕರಾಚಿ ಕ್ರಿಕೆಟ್ ಅಸೋಸಿಯೇಷನ್ನ ಅಧ್ಯಕ್ಷ ಸಿರಾಜುಲ್ ಇಸ್ಲಾಂ ಬುಕಾರಿ ತಿಳಿಸಿದರು.