ಇಂಡಿಯನ್ ವೆಲ್ಸ್ ಮಾಸ್ಟರ್ಸ್: ಬೋಪಣ ಜೋಡಿಗೆ ಸೋಲು
ಇಂಡಿಯನ್ ವೆಲ್ಸ್: ಭಾರತದ ರೋಹನ್ ಬೋಪಣ ಮತ್ತು ರಾಜೀವ್ ರಾಮ್ ಜೋಡಿ ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಎಟಿಪಿ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ತನ್ನ ಹೋರಾಟವನ್ನು ಅಂತ್ಯಗೊಳಿಸಿದೆ.
ಬೋಪಣ ಮತ್ತು ರಾಜೀವ್ ರಾಮ್ ಜೋಡಿ ಮೊದಲ ಸುತ್ತಿನ ಪಂದ್ಯದಲ್ಲಿ ಪೊಲೆಂಡ್ನ ಲೂಕಾಸ್ ಕ್ಯೂಬೋಟ್ ಮತ್ತು ಸರ್ಬಿಯಾದ ಜಂಕೋ ತಿಪ್ಸರ್ವಿಚ್ ಜೋಡಿ ವಿರುದ್ಧ 4-6, 6-7 (4) ನೇರ ಸೆಟ್ಗಳ ಅಂತರದಿಂದ ಪರಾಭವ ಹೊಂದಿತು.
ಇನ್ನು ಭಾರತದ ಮಹೇಶ್ ಭೂಪತಿ ಮತ್ತು ಅವರ ಜತೆಯಾಟಗಾರ ಕೆನಡಾದ ಡೇನಿಯಲ್ ನೆಸ್ಟೋರ್ ಜೋಡಿ ಪಂದ್ಯಾವಳಿಯಲ್ಲಿ 3ನೇ ಶ್ರೇಯಾಂಕ ಪಡೆದಿದ್ದು, ಮೊದಲ ಸುತ್ತಿನ ಪಂದ್ಯದಲ್ಲಿ ಸ್ಪೇನ್ನ ಫೆಲಿಸಿಯಾನೋ ಲೊಪೆಜ್ ಮತ್ತು ಕೆನಡಾದ ಮೈಲೋಸ್ ರೋನಿಕ್ ಜೋಡಿಯನ್ನು ಎದುರಿಸಲಿದ್ದಾರೆ.
ಭಾರತದ ಇನ್ನೊಬ್ಬ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಮತ್ತು ಅವರ ಜತೆಯಾಟಗಾರ ಜರ್ಗನ್ ಮೇಲ್ಜರ್ 7ನೇ ಶ್ರೇಯಾಂಕ ಪಡೆದಿದ್ದು, ಮೊದಲ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ನ ಬೆನಿಯಿಟ್ ಪೈರ್ ಮತ್ತು ಸ್ವಿಸ್ನ ಸ್ಟಾನಿಸ್ಲಾಸ್ ವಾವ್ರಿಂಕಾ ಜೋಡಿಯನ್ನು ಎದುರಿಸಲಿದ್ದಾರೆ.