ಕಿವೀಸ್ ಮಣಿಸಿದ ಪಾಕ್
ಐಪೋ (ಮಲೇಷ್ಯಾ): ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ತಂಡ ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ 4-3 ಗೋಲುಗಳ ಅಂತರದಿಂದ ಜಯ ಸಾಧಿಸಿತು.
ಪಂದ್ಯದ 19, 38 ಹಾಗೂ 58ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಪಾಕ್ ನಾಯಕ ಇಮ್ರಾನ್ ಮೊಹ್ಮದ್ ಅವರು ತಂಡ ಜಯದ ದಡ ಸೇರಲು ಕಾರಣರಾದರು. ಇನ್ನೊಂದು ಗೋಲನ್ನು ಪಂದ್ಯದ 21ನೇ ನಿಮಿಷದಲ್ಲಿ ಹಜೀನ್ ಖಾನ್ ಅಬ್ದುಲ್ ದಾಖಲಿಸಿದರು.
ಕಿವೀಸ್ ತಂಡದ ಪರ ಪಂದ್ಯದ 30ನೇ ನಿಮಿಷದಲ್ಲಿ ದೊರಕಿದ ಪೆನಾಲ್ಟಿ ಕಾರ್ನರ್ ಮೂಲಕ ರಸೆಲ್ ಕಾನೆ ಗೋಲು ದಾಖಲಿಸಿದರೆ, ಟರ್ರಂಟ್ ಬ್ಲೈರ್ ಪಂದ್ಯದ 52ನೇ ನಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿದರು. 56ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಡಿಫೆಂಡರ್ ಹೆವಾರ್ಡ್ ಆ್ಯಂಡಿ ಗೋಲು ದಾಖಲಿಸಿದರು.