ತಿರುಗೇಟು ನೀಡಿದ ಆಂಗ್ಲರು
ಡುನೆದಿನ್: ಅಲಾಸ್ಟೇರ್ ಕುಕ್ (116) ಮತ್ತು ನಿಕ್ ಕಾಂಪ್ಟನ್ (ಅಜೇಯ 102) ಶತಕ ದಾಖಲಿಸುವ ಮೂಲಕ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ತಿರುಗೇಟು ನೀಡಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ದಾಖಲಿಸಿದ ಕಾಂಪ್ಟನ್ ಮತ್ತು ಕುಕ್ ಜತೆಯಾಟದಲ್ಲಿ ಮೊದಲ ವಿಕೆಟ್ಗೆ 231 ರನ್ ಗಳಿಸುವ ಮೂಲಕ ಇಂಗ್ಲೆಂಡ್ 4ನೇ ದಿನಾಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿದೆ. ಇದರೊಂದಿಗೆ ಇಂಗ್ಲೆಂಡ್ 59 ರನ್ಗಳ ಹಿನ್ನಡೆ ಅನುಭವಿಸಿದೆ.
252 ಎಸೆತಗಳನ್ನು ಎದುರಿಸಿದ ಕುಕ್ ಶತಕದಲ್ಲಿ 15 ಬೌಂಡರಿಗಳು ಸೇರಿದ್ದವು. ಇನ್ನು 265 ಎಸೆತಗಳನ್ನು ಎದುರಿಸಿದ ಕಾಂಪ್ಟನ್ ಮೊತ್ತದಲ್ಲಿ 10 ಬೌಂಡರಿಗಳು ಸೇರಿದ್ದವು. ಇದಕ್ಕೂ ಮುನ್ನ 9 ವಿಕೆಟ್ ನಷ್ಟಕ್ಕೆ 460 ರನ್ ಗಳಿಸಿದ್ದ ನ್ಯೂಜಿಲೆಂಡ್ ಡಿಕ್ಲೇರ್ ಘೋಷಿಸಿತು. ಮೊದಲ ಇನಿಂಗ್ಸ್ನಲ್ಲಿ 167 ರನ್ಗಳಿಗೆ ಆಲೌಟ್ ಆಗಿದ್ದ ಇಂಗ್ಲೆಂಡ್, ದ್ವಿತೀಯ ಇನಿಂಗ್ಸ್ನಲ್ಲಿ ಉತ್ತಮ ಹೋರಾಟ ನಡೆಸಿದ್ದು, ಕೇವಲ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿರುವ ಪಂದ್ಯ ಬಹುತೇಕ ಡ್ರಾದಲ್ಲಿ ಅಂತ್ಯಗೊಳ್ಳುವ ಸಾಧ್ಯತೆಗಳಿವೆ. ಮೊದಲ ಇನಿಂಗ್ಸ್ನಲ್ಲಿ ಅದ್ಭುತ ದಾಳಿಯನ್ನು ನಡೆಸಿದ್ದ ಕಿವೀಸ್ ಬೌಲರ್ಗಳು ದ್ವಿತೀಯ ಇನಿಂಗ್ಸ್ನಲ್ಲಿ ಅದೇ ರೀತಿಯ ದಾಳಿ ನಡೆಸುವಲ್ಲಿ ವೈಫಲ್ಯ ಕಂಡರು. ಪಂದ್ಯದ ಆರಂಭಿಕ ದಿನ ಸಂಪೂರವಾಗಿ ಮಳೆಗೆ ಆಹುತಿಯಾಗಿತ್ತು.
ಸಂಕ್ಷಿಪ್ತ ಸ್ಕೋರ್
ಮೊದಲ ಇನಿಂಗ್ಸ್
ಇಂಗ್ಲೆಂಡ್ 167/10
ನ್ಯೂಜಿಲೆಂಡ್ 460/9 (ಡಿ)
ದ್ವಿತೀಯ ಇನಿಂಗ್ಸ್:
ಇಂಗ್ಲೆಂಡ್: 234/1
ಕುಕ್ 116, ಕಾಂಪ್ಟನ್ ಅಜೇಯ 102
ಬೌಲಿಂಗ್: ಬೋಲ್ಟ್ 34/1, ಸೌಥೀ 47/0