ದಕ್ಷಿಣ, ಪೂರ್ವ ಮುಖಾಮುಖಿ
ನವದೆಹಲಿ: 2012-13ನೇ ಸಾಲಿನ ಪ್ರೊ.ಡಿ.ಬಿ.ದೇವ್ಧರ್ ಟ್ರೋಫಿ ಭಾನುವಾರದಿಂದ ಆರಂಭವಾಗುತ್ತಿದ್ದು, ಗುವಾಹತಿಯಲ್ಲಿ ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ದಕ್ಷಿಣ ವಲಯ ಹಾಗೂ ಪೂರ್ವ ವಲಯಗಳು ಮುಖಾಮುಖಿಯಾಗಲಿವೆ.
ಈ ಪಂದ್ಯ ಏಕೈಕ ಕ್ವಾಟರ್ಫೈನಲ್ ಪಂದ್ಯವಾಗಿದ್ದು, ಉಳಿದ ತಂಡಗಳು ನೇರವಾಗಿ ಸೆಮಿಫೈನಲ್ ಪಂದ್ಯದಲ್ಲಿ ಸೆಣೆಸಲಿವೆ. ಮಾ.11 ಕೇಂದ್ರ ವಲಯ ಹಾಗೂ ಉತ್ತರ ವಲಯಗಳ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ಹಾಗೂ ಮಾ.13 ರಂದು ಫೈನಲ್ ಪಂದ್ಯ ನಡೆಯಲಿದೆ.
ಈ ಪಂದ್ಯಾವಳಿಯಲ್ಲಿ ಐದು ವಲಯಗಳು ಭಾಗವಹಿಸುತ್ತಿದ್ದು, ಈ ಪಂದ್ಯಾವಳಿಯನ್ನು ನಾಕೌಟ್ ಮಾದರಿಯಲ್ಲಿ ನಡೆಸಲಾಗುತ್ತಿದೆ.