ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತಕ್ಕೆ ಆಗಮಿಸಿದ ಪಾಕ್ ತಂಡ

Mainashree
Updated On : 9 Mar 2013, 10:59 am

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಹೀರೋ ಏಷ್ಯನ್ ಸೈಕ್ಲಿಂಗ್ ಚಾಂಪಿಯನ್ಷಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಪಾಕಿಸ್ತಾನ ಸೈಕ್ಲಿಂಗ್ ತಂಡ, ಶನಿವಾರ ಭಾರತಕ್ಕೆ ಆಗಮಿಸಿತು. ಭಾರತ ಸರ್ಕಾರದಿಂದ ತಡವಾಗಿ ವೀಸಾ ಸಿಕ್ಕಿದ್ದರಿಂದ ಪಾಕ್ ಸೈಕ್ಲಿಸ್ಟ್ಗಳ, ಪಂದ್ಯಾವಳಿ ಆರಂಭವಾಗಿ ಮೂರನೇ ದಿನಗಳ ನಂತರ ಭಾರತಕ್ಕೆ ಆಗಮಿಸಿದೆ.
ತಂಡದಲ್ಲಿ, ಆರು ರೈಡರ್ಗಳಿದ್ದು ಇಲ್ಲಿನ ಬುದ್ಧ್ ಅಂತಾರಾಷ್ಟ್ರೀಯ ಸರ್ಕ್ಯೂಟ್ನಲ್ಲಿ ಮಾ. 13ರಿಂದ ಆರಂಭಗೊಳ್ಳಲಿರುವ ರೋಡ್ ರೇಸ್ನಲ್ಲಿ ಪಾಲ್ಗೊಳ್ಳಲಿದೆ.
ವೀಸಾ ತಡವಾಗಿ ಲಭ್ಯವಾಗಿದ್ದರ ಪರಿಣಾಮ, ಪಾಕ್ ತಂಡಕ್ಕೆ ಪಂದ್ಯಾವಳಿಯಲ್ಲಿ ಇದುವರೆಗೂ ನಡೆದ ಟ್ರಾಕ್ ಹಾಗೂ ಜೂನಿಯರ್ ವಿಭಾಗಗಳ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ.
ಇರಾಕ್ ತಂಡ ಇಂದು ಆಗಮನ: ಇದೇ ರೀತಿ ವೀಸಾ ಸಮಸ್ಯೆ ಉಂಟಾಗಿದ್ದ ಹಿನ್ನೆಲೆಯಲ್ಲಿ, ಇರಾಕ್ ತಂಡ ಕೂಡ, ಭಾನುವಾರ ಭಾರತಕ್ಕೆ ಆಗಮಿಸಲಿದೆ. 34 ಸೈಕ್ಲಿಸ್ಟ್ಗಳುಳ್ಳ ಇರಾಕ್ ತಂಡ, ಭಾನುವಾರ ಬೆಳಗ್ಗೆ ಭಾರತಕ್ಕೆ ಬಂದಿಳಿಯಲಿದೆ ಎಂದು ಮೂಲಗಳು ಹೇಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement